ಭಜನೆಯಿಂದ ಮನಸ್ಸುಗಳಲ್ಲಿ ಮೂಡುತ್ತದೆ ಏಕತೆ : ವೆಂಕಟ್ರಮಣ ರಾವ್ ಹೇಳಿಕೆ

bhajane
Published on

ಕಡಬ: ಮನೆಗಳಲ್ಲಿ ಮನಸ್ಸುಗಳ ಏಕತೆಗಾಗಿ ಪ್ರತಿನಿತ್ಯ ಭಜನೆ ನಡೆಯಬೇಕು. ಭಜನೆ ಮೂಲಕ ನಮ್ಮ ಮಕ್ಕಳಿಗೆ ಧಾರ್ಮಿಕ ಚಿಂತನೆಗಳ ಅರಿವು ಮೂಡಿಸಬೇಕು. ಧರ್ಮ ಜಾಗೃತಿ ಮನೆಗಳಿಂದ ಆರಂಭವಾದಾಗ ದೇಶ ಸುಭಿಕ್ಷವಾಗುತ್ತದೆ ಎಂದು ಕಡಬ ಸರಸ್ವತೀ ಸಮೂಹ ಸಂಸ್ಥೆಗಳ ಸಂಚಾಲಕ ಮಂಕುಡೆ ವೆಂಕಟ್ರಮಣ ರಾವ್ ಹೇಳಿದರು.

ದೇವಾಲಯಗಳ ಸಂವರ್ಧನ ಸಮಿತಿ ಮಂಗಳೂರು ವಿಭಾಗ ಮತ್ತು ಕೊಲ ಗ್ರಾಮದ ಆತೂರು ಶ್ರೀ ಸದಾಶಿವ ದೇವಸ್ಥಾನದ ನಿಕಟಪೂರ್ವ ವ್ಯವಸ್ಥಾಪನ ಸಮಿತಿ ಮಾರ್ಗದರ್ಶನದಲ್ಲಿ ಕೆಮ್ಮಾರ ಜಗನ್ನಾಥ ಅವರ ಮನೆಯಲ್ಲಿ ನಡೆದ ಬೈಲುವಾರು ಭಜನೆ ಬಳಿಕ ನಡೆದ ಸಭೆಯಲ್ಲಿ ಮಾತನಾಡಿದರು.

ನಮ್ಮ ಹಿರಿಯರಿಂದ ಬಳುವಳಿಯಾಗಿ ಬಂದ ಆಧ್ಯಾತ್ಮದ ಮೌಲ್ಯಗಳು ಇಂದಿಗೂ ಪ್ರಸ್ತುತವಾಗಿವೆ. ಹೀಗಾಗಿ ಭಾರತಕ್ಕೆ ಪ್ರಪಂಚದಲ್ಲಿ ಇತರ ದೇಶಗಳಿಂದ ಹೆಚ್ಚಿನ ಗೌರವ ಪ್ರಾಪ್ರಿಯಾಗುತ್ತಿದೆ. ಊರಿನಲ್ಲಿ ಶಾಂತಿ ನೆಲೆಸಬೇಕಾದರೆ ಧರ್ಮ ಜಾಗೃತಿ ಅಗತ್ಯ. ಈ ನಿಟ್ಟಿನಲ್ಲಿ ಭಜನೆ ಮೂಲಕ ಊರಿನ ಸುಭಿಕ್ಷೆಗಾಗಿ ಕೊಲ ಗ್ರಾಮದಲ್ಲಿ ಆರಂಭವಾದ ಬೈಲುವಾರು ಭಜನೆ ಪ್ರತಿ ತಿಂಗಳು ಪ್ರತಿ ಬೈಲಿನ ಓರ್ವರ ಮನೆಯಲ್ಲಿ ನಡೆಯುತ್ತಿರುವುದು ಮಾದರಿಯಾಗಿದೆ ಎಂದರು.

ಜಗನ್ನಾಥ ಕೆಮ್ಮಾರ, ರಾಘವ ಪಡೀಲು ಮಂಗಳೂರು ಉಪಸ್ಥಿತರಿದ್ದರು. ವಾಮನ ಬರಮೇಲು ಸ್ವಾಗತಿಸಿ, ನಿರೂಪಿಸಿದರು. ಪ್ರಕಾಶ್ ಕೆಮ್ಮಾರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net