ಗೋಪಾಡಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಸರಸ್ವತಿ ಜಿ.ಪುತ್ರನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು 
ಜಿಲ್ಲೆ

ಭಾಷೆಯ ಜತೆಗೆ ಸಂಬಂಧಗಳ ಬಾಂಧವ್ಯ ವೃದ್ಧಿ

ಇಂದಿರಾ ಎನ್ ಕೆ

ವಿಜಯವಾಣಿ ಸುದ್ದಿಜಾಲ ಕೋಟ

ಭಾಷೆಯ ಜತೆಗೆ ಸಂಬಂಧಗಳ ಬಾಂಧವ್ಯ ವೃದ್ಧಿಸಿ. ಸ್ನೇಹದಿಂದ ಸಂಬಂಧಗಳನ್ನು ಗಟ್ಟಿಗೊಳಿಸಬೇಕು. ಸಿಕ್ಕಿದ ಅವಕಾಶಗಳನ್ನು ಸೂಕ್ತವಾಗಿ ಬಳಸಿಕೊಳ್ಳಿ ಎಂದು ಚಿತ್ರನಟ ರಘು ಪಾಂಡೇಶ್ವರ ಹೇಳಿದರು

ಕೋಟದ ಹಂದಟ್ಟು ಗೆಳೆಯರ ಬಳಗ ಸಭಾಂಗಣದಲ್ಲಿ ಪಂಚವರ್ಣ ಮಹಿಳಾ ಮಂಡಲ, ಪಂಚವರ್ಣ ಯುವಕ ಮಂಡಲ ಕೋಟ ನೇತೃತ್ವದಲ್ಲಿ ಕಸಾಪ ಬ್ರಹ್ಮಾವರ ಘಟಕದ ಸಹಯೋಗದೊಂದಿಗೆ ನಡೆದ ‘ಆಸಾಡಿ ಒಡ್ರ್’ ಕಾರ್ಯಕ್ರಮದಲ್ಲಿ ಮಾತನಾಡಿದರು.

ಗೀತಾನಂದ ಫೌಂಡೇಶನ್ ಮಣೂರು ಪ್ರವರ್ತಕ ಆನಂದ್ ಸಿ. ಕುಂದರ್ ಕಾರ್ಯಕ್ರಮ ಉದ್ಘಾಟಿಸಿದರು. ಕಸಾಪ ಬ್ರಹ್ಮಾವರ ತಾಲೂಕು ಘಟಕದ ಅಧ್ಯಕ್ಷ ಗುಂಡ್ಮಿ ರಾಮಚಂದ್ರ ಐತಾಳ್ ಗ್ರಾಮೀಣ ಪರಿಕರವನ್ನು, ಚಿಂತಕಿ ಪ್ರತಿಭಾ ಎಸ್. ಕುಂದರ್ ಗ್ರಾಮೀಣ ತಿನಿಸುಗಳನು ಅನಾವರಣಗೊಳಿಸಿದರು.

ಗೋಪಾಡಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಸರಸ್ವತಿ ಜಿ.ಪುತ್ರನ್ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಹುಮುಖ ಪ್ರತಿಭೆ ಸುಜಾತ ಎಂ. ಬಾಯರಿ ಅವರನ್ನು ಆಸಾಡಿ ಒಡ್ರ್ ಸಾಧಕ ಪುರಸ್ಕಾರ ನೀಡಿ ಗೌರವಿಸಲಾಯಿತು. ಪಂಚವರ್ಣ ಮಹಿಳಾ ಮಂಡಲದ ಪ್ರಥಮ ಅಧ್ಯಕ್ಷೆ ಕಲಾವತಿ ಅಶೋಕ್‌ಗೆ ವಿಶೇಷ ಅಭಿನಂದನೆ ಸಲ್ಲಿಸಲಾಯಿತು. ನಟ ರಘು ಪಾಂಡೇಶ್ವರ ಅವರನ್ನು ಸನ್ಮಾನಿಸಲಾಯಿತು.

ಹಂದಟ್ಟು ಮಹಿಳಾ ಬಳಗದ ಅಧ್ಯಕ್ಷೆ ರತ್ನಾ ಪೂಜಾರಿ ವಿಜಯಬಾಲನಿಕೇತ ಬಾಲಾಶ್ರಮಕ್ಕೆ ದಿನಸಿ ಪರಿಕರಗಳನ್ನು ಹಸ್ತಾಂತರಿಸಿದರು. ಪಂಚವರ್ಣ ಮಹಿಳಾ ಮಂಡಲ ಅಧ್ಯಕ್ಷೆ ಲಲಿತಾ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಶ್ರೀಕಾಂತ್ ಶೆಣೈ ಕೋಟ, ಲಿಲಾವತಿ ಗಂಗಾಧರ್, ಕುಸುಮಾ ದೇವಾಡಿಗ, ಶೇವಧಿ ಸುರೇಶ್ ಗಾಣಿಗ, ಅಜಿತ್ ಆಚಾರ್ ಮತ್ತಿತರರು ಉಪಸ್ಥಿತರಿದ್ದರು. ಶಕೀಲಾ ಎನ್.ಪೂಜಾರಿ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ವೀಣಾ ಪ್ರಕಾಶ್ ಸ್ವಾಗತಿಸಿದರು. ಸುಜಾತ ಉದಯ್ ತಿಂಗಳಾಯ ವಂದಿಸಿದರು. ನರೇಂದ್ರ ಕುಮಾರ್ ಕೋಟ ಕಾರ್ಯಕ್ರಮ ನಿರೂಪಿಸಿದರು. ರವೀಂದ್ರ ಕೋಟ ಸಂಯೋಜಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವನ್ನು ಸ್ನೇಹಕೂಟದ ಸಂಚಾಲಕಿ ಭಾರತಿ ವಿ ಮಯ್ಯ ಉದ್ಘಾಟಿಸಿದರು.

ಗ್ರಾಮೀಣ ಖಾದ್ಯ ಸ್ಪರ್ಧೆ

ಕಾರ್ಯಕ್ರಮದಲ್ಲಿ ಕಂಬಳ ಪರಿಕರ, ಸಾಂಬಾರ್ ಬಟ್ಲ್, ನರೋಳಿ ಸೊಪ್ಪಿನ ದೊಸೆ, ಬೆಸಿದ ಕಡ್ಲೆ, ಅಕ್ಕಿ ಉಂಡಿ ಸಹಿತ 80ಕ್ಕೂ ಹೆಚ್ಚು ಗ್ರಾಮೀಣ ತಿನಿಸುಗಳ ಸ್ಪರ್ಧೆ ನಡೆಯಿತು.