ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಉಚಿತ ತರಬೇತಿ

training
ಶಿಕ್ಷಣ ಫೌಂಡೇಶನ್ ವತಿಯಿಂದ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ತರಬೇತಿ ನಡೆಯಿತು. ತರಬೇತುದಾರೆ ಆಶಾ ಶೆಟ್ಟಿ, ಎಚ್.ವಿ ಇಬ್ರಾಹಿಂಪುರ, ಯೋಜನಾಧಿಕಾರಿ ಸಂದೇಶ್ ಮೊದಲಾದವರಿದ್ದರು
Published on

ಬ್ರಹ್ಮಾವರ: ವಾರಂಬಳ್ಳಿ ಗ್ರಾಮ ಪಂಚಾಯಿತಿಯ ಗ್ರಂಥಾಲಯ ವಿಭಾಗದ ನೇತೃತ್ವದಲ್ಲಿ ಶಿಕ್ಷಣ ಫೌಂಡೇಶನ್ ವತಿಯಿಂದ ಮೊದಲ ಬಾರಿ ತಾಲೂಕು ಮಟ್ಟದ ಉಚಿತ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ತರಬೇತಿ ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ನಡೆಯಿತು.

ಶಿಕ್ಷಣ ಫೌಂಡೇಶನ್ ತರಬೇತುದಾರೆ ಆಶಾ ಶೆಟ್ಟಿ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ, ಸಾರ್ವಜನಿಕ ಸಂಹವನ, ಕೃತಕ ಬುದ್ಧಿಮತ್ತೆ , ತಂತ್ರಜ್ಞಾನದ ಕೌಶಲ, ಶಿಕ್ಷಣದ ಆಯ್ಕೆ ಹಾಗೂ ಉದ್ಯೋಗ ಸಂದರ್ಶನದ ಮಾಹಿತಿ ಸಹಿತ ಹಲವು ವಿಚಾರಗಳಿಗೆ ತರಬೇತಿ ನೀಡಿದರು.
ಬ್ರಹ್ಮಾವರ ತಾಲೂಕು ಪಂಚಾಯಿತಿ ಕಾರ್ಯನಿರ್ವಣಾಧಿಕಾರಿ ಎಚ್.ವಿ ಇಬ್ರಾಹಿಂಪುರ, ತಾಪಂ ಯೋಜನಾಧಿಕಾರಿ ಸಂದೇಶ್, ವಾರಂಬಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಉಮಾಬಾಯಿ, ಕಾರ್ಯದರ್ಶಿ ಶೇಖರ್ ನಾಯ್ಕ, ಗ್ರಂಥಾಲಯ ಮೇಲ್ವಿಚಾರಕಿ ಬೇಬಿ ಪೂಜಾರಿ, ಶಿಕ್ಷಕ ಶೇಖರ್ ಕೋಟ್ಯಾನ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net