ಮರವಂತೆಯ ಆಸರೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸಾಧಕರನ್ನು ಗೌರವಿಸಲಾಯಿತು 
ಜಿಲ್ಲೆ

ಮರವಂತೆಯಲ್ಲಿ ಆಸಾಡಿ ಒಡ್ರ್ ಕಾರ್ಯಕ್ರಮ

ಇಂದಿರಾ ಎನ್ ಕೆ

ಗಂಗೊಳ್ಳಿ: ಮರವಂತೆಯ ಆಸರೆ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಆಸಾಡಿ ಒಡ್ರ್ ಕಾರ್ಯಕ್ರಮ ಮರವಂತೆಯ ಸಾಧನಾ ಸಮುದಾಯ ಭವನದಲ್ಲಿ ಇತ್ತೀಚೆಗೆ ನಡೆಯಿತು.

ಜ್ಯೋತಿ ದೇವಾಡಿಗ ಮರವಂತೆ ಶುಭಹಾರೈಸಿದರು. ಆಟಿಯ ತಿಂಡಿಗಳ ತೀರ್ಪುಗಾರ್ತಿಯಾಗಿ ಡಾ.ರೂಪಶ್ರೀ ಮರವಂತೆ ಕಾರ್ಯನಿರ್ವಹಿಸಿದರು.
ಸಿಎ ಪರೀಕ್ಷೆಯಲ್ಲಿ ಉತ್ತೀರ್ಣರಾದ ಪ್ರದೀಪ್ ಪೂಜಾರಿ ಹೊಸಮನೆ ಅವರನ್ನು ಅಭಿನಂದಿಸಲಾಯಿತು. ಬಳಿಕ ಕೆರೆದಡ, ಕಣ್ಣಾಮುಚ್ಚಾಲೆ, ಕಪ್ಪೆಜಿಗಿತ ಸಹಿತ ವಿವಿಧ ಗ್ರಾಮೀಣ ಕ್ರೀಡೆಗಳನ್ನು ಆಯೋಜಿಸಲಾಯಿತು. ಆಸರೆ ಟ್ರಸ್ಟಿಗಳಾದ ಮಂಜುನಾಥ್ ಮರವಂತೆ, ದಯಾನಂದ ಬಳೆಗಾರ್, ರವಿ ಮಡಿವಾಳ್, ಸಂತೋಷ ಮೊಗವೀರ, ರಾಜೇಶ್ ಆಚಾರ್ಯ, ಕರುಣಾಕರ ಆಚಾರ್ಯ, ಸತೀಶ್ ಪೂಜಾರ್, ಶಿವರಾಂ ಪೂಜಾರಿ ಉಪಸ್ಥಿತರಿದ್ದರು.