ಗಂಗೊಳ್ಳಿ: ಹಕ್ಕಿಗಳೇ ನಮ್ಮ ರಕ್ಷಕರು. ನಾವು ಪ್ರಕೃತಿ ಜತೆಗೆ ಜೀವರಾಶಿಗಳನ್ನೂ ರಕ್ಷಿಸುವ ಜವಾಬ್ದಾರಿ ಹೊಂದಿದ್ದೇವೆ ಪರಿಸರ ತಜ್ಞ ದಿನೇಶ ಹೊಳ್ಳ ಹೇಳಿದರು. ಕುಂದಾಪುರ ತಾಲೂಕಿನ ಕೋಟೇಶ್ವರದಲ್ಲಿ ಶನಿವಾರ ಸುಪ್ರಸನ್ನ ನಕ್ಕತ್ತಾಯ ಅವರ 100 ಕಲಾಕೃತಿಗಳ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.
ನಿವೃತ್ತ ಪ್ರಾಂಶುಪಾಲೆ ಚಿತ್ರಾ ಕಾರಂತ ವಿದ್ಯಾರ್ಥಿಗಳಿಗೆ ಶಿಫಾರಸು ಪತ್ರ ವಿತರಿಸಿ ಶುಭಹಾರೈಸಿದರು. ಮುಖ್ಯ ಅಭ್ಯಾಗತರಾಗಿದ್ದ ಕುಂದಪ್ರಭ ಸಂಸ್ಥೆಯ ಯು. ಎಸ್. ಶೆಣೈ, ಹರೀಶ ಸಾಗಾ ಮಾತನಾಡಿದರು. ಸುಪ್ರಸನ್ನ ನಕ್ಕತ್ತಾಯ ಸ್ವಾಗತಿಸಿದರು. ವಿದ್ಯಾರ್ಥಿನಿ ಕೃತಿ ದೇವಾಡಿಗ ವಂದಿಸಿದರು. ವಸಂತಿ ಪಂಡಿತ ಸುಪ್ರಸನ್ನ ನಕ್ಕತ್ತಾಯರನ್ನು ಅಭಿನಂದಿಸಿದರು. ಸುಲೋಚನಾ ರಮೇಶ್ ಕಾರ್ಯಕ್ರಮ ನಿರೂಪಿಸಿದರು.