ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಅರೆಮಲೆಬೆಟ್ಟ ದೈವಸ್ಥಾನದಲ್ಲಿ 12 ವರ್ಷಕ್ಕೊಮ್ಮೆ ದೈವದ ಚೈತನ್ಯ ತುಂಬುವ ಕಾರ್ಯ ನಡೆಯುತ್ತದೆ. ಚಂಡಿಕಾ ಹೋಮದ ಮಂಗಳಾರತಿ ಆದಾಗ ಸೂರ್ಯರಶ್ಮಿ ನೇರವಾಗಿ ದೇವರ ಬಿಂಬಕ್ಕೆ ಬಿದ್ದಿದೆ. ಇದು 3 ಸೆಕೆಂಡು ಮಾತ್ರ ಇತ್ತು. ಯಾರು ಶ್ರದ್ಧಾ-ಭಕ್ತಿಯಿಂದ ಇದ್ದರೋ ಅವರಿಗೆ ಕಂಡು ಬಂದಿದೆ. ದೈವ ದೇವರ ಮೇಲೆ ಭಕ್ತಿ ಇದ್ದಾಗ ಇಷ್ಟಾರ್ಥ ಈಡೇರುತ್ತದೆ ಎಂದು ಶಶಿಧರ ಶೆಟ್ಟಿ ಬರೋಡ ಹೇಳಿದರು.
ಅರೆಮಲೆಬೆಟ್ಟ ಕೊಡಮಣಿತ್ತಾಯ ದೈವಸ್ಥಾನದಲ್ಲಿ ಕುಂಬಾಭಿಷೇಕ ಅಂಗವಾಗಿ ನಡೆದ ಧಾರ್ಮಿಕ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಓಡೀಲು ದೇವಸ್ಥಾನದ ಬ್ರಹ್ಮಕಲಶಕ್ಕೆ ಎಲ್ಲರೂ ಸಹಕಾರ ನೀಡಿದ್ದಾರೆ. ನಾವು ಧರ್ಮ ರಕ್ಷಿಸಿದರೆ, ಧರ್ಮ ನಮ್ಮನ್ನು ರಕ್ಷಿಸುತ್ತದೆ ಎಂದರು.
ಧಾರ್ಮಿಕ ಉಪನ್ಯಾಸ ನೀಡಿದ ತುಳು ಜನಪದ ವಿದ್ವಾಂಸ ಕೆ.ಕೆ.ಪೇಜಾವರ ಸುರತ್ಕಲ್ ಮಾತನಾಡಿ, ತುಳುನಾಡಿನಲ್ಲಿ 2500 ದೈವಗಳ ಆರಾಧನೆ ನಡೆಯುತ್ತಿದ್ದು, ದೈವಾರಾಧನೆಯಲ್ಲಿ ನಾವು ಎಷ್ಟೋ ಪಾರಿಭಾಷಿಕೆ ಮರೆಯುತ್ತಿದ್ದೇವೆ. ಆಚರಣೆಗಳಲ್ಲೂ ಬದಲಾವಣೆಯಾಗುತ್ತಿದೆ. ನಮ್ಮ ಆಚರಣೆ, ಸಂಸ್ಕೃತಿ ಮಕ್ಕಳಿಗೆ ಕಲಿಸಬೇಕು ಎಂದರು.
ಎಸ್‌ಡಿಎಂ ಇಂಜಿನಿಯರಿಂಗ್ ಕಾಲೇಜು ಉಪನ್ಯಾಸಕ, ದೈವನರ್ತಕ ಡಾ.ರವೀಶ್ ಪಡುಮಲೆ ಧಾರ್ಮಿಕ ಉಪನ್ಯಾಸ ನೀಡಿ ದೈವಗಳ ನಾಡು ತುಳುನಾಡು, ದೈವದ ಕೊಡಿಯಡಿಯಲ್ಲಿ 16 ಜಾತಿಯವರು ಒಂದೇ ಮಕ್ಕಳಂತೆ ಇರಬೇಕು. ಸಾವಿರಾರು ವರ್ಷಗಳ ಹಿಂದೆ ನಮ್ಮ ಹಿರಿಯರು ಹಾಕಿಕೊಟ್ಟ ಸಂಪ್ರದಾಯ ಪಾಲಿಸಬೇಕು ಎಂದರು.
ಓಡೀಲು ದೇವಸ್ಥಾನ ಅರ್ಚಕ ವಿಷ್ಟುಪ್ರಕಾಶ್ ಭಟ್, ರಾಜೇಶ್ ಶೆಟ್ಟಿ ನವಶಕ್ತಿ ಗುರುವಾಯನಕೆರೆ, ಹರೀಶ್ ಶೆಟ್ಟಿ ನವಶಕ್ತಿ, ದಿನೇಶ್ ಶೆಟ್ಟಿ ಪೂನಾ, ವಕೀಲ ನೋಟರಿ ಶಶಿಕಿರಣ್ ಜೈನ್, ಅನ್ನಪೂರ್ಣ ಮೆಟಲ್ಸ್ ಮಾಲೀಕ ರಾಘ್ನೇಶ್, ಪ್ರಕಾಶ್ ಜೈನ್ ಡೇವುಣಿ ಬಳಂಜ, ಉದ್ಯಮಿ ಕಿರಣ್‌ಚಂದ್ರ ಡಿ.ಪುಷ್ಪಗಿರಿ, ಗುರುವಾಯನಕೆರೆ ಕೃಷಿಪತ್ತಿನ ಸಹಕಾರಿ ಸಂಘ ಅಧ್ಯಕ್ಷ ಮುಗುಳಿ ನಾರಾಯಣ ಭಟ್, ಪ್ರಕಾಶ್ ಎಲೆಕ್ಟ್ರಾನಿಕ್ಸ್ ಮಾಲೀಕ ಪುಷ್ಪರಾಜ್ ಶೆಟ್ಟಿ, ಪ್ರಗತಿಪರ ಕೃಷಿಕ ರಾಧಾಕೃಷ್ಣ ರೈ, ಬಂಗೇರ ಬ್ರಿಗೇಡ್ ಅಧ್ಯಕ್ಷೆ ಬಿನುತಾ ವಿ.ಬಂಗೇರ, ಪ್ರಮೋದ್ ಶೆಟ್ಟಿ ಕಜೆೆ, ಶೆಣೈ ರೆಸ್ಟೋರೆಂಟ್ ಮಾಲಕಿ ದೀಪಾ ಶೆಣೈ, ಹಿರಿಯರಾದ ಆನಂದ ಶೆಟ್ಟಿ ವಾತ್ಸಲ್ಯ, ವಿತೇಶ್ ಜೈನ್ ಪಡಂಗಡಿ ಭಾಗವಹಿಸಿದ್ದರು. ಶ್ರೀ ಕೊಡಮಣಿತ್ತಾಯ ದೈವಸ್ಥಾನ ಆನುವಂಶಿಕ ಆಡಳಿತ ಮೊಕ್ತೇಸರ ಸುಖೇಶ್ ಕುಮಾರ್ ಕಡಂಬು, ಕಾರ್ಯಾಧ್ಯಕ್ಷ ಸುಮಂತ್ ಕುಮಾರ್ ಜೈನ್, ಪ್ರಧಾನ ಕಾರ್ಯದರ್ಶಿ ಪುರಂದರ ಶೆಟ್ಟಿ ಪಾಡ್ಯಾರು, ಕೋಶಾಧಿಕಾರಿ ಪ್ರದೀಪ್ ಕುಮಾರ್ ಶೆಟ್ಟಿ ವಾತ್ಸಲ್ಯ ಉಪಸ್ಥಿತರಿದ್ದರು. ಉದ್ಯಮಿ ಶಶಿಧರ ಶೆಟ್ಟಿ ಬರೋಡ ಸ್ವಾಗತಿಸಿದರು. ನಿತಿನ್ ಬರಾಯ ನಿರೂಪಿಸಿದರು. ಶಿಕ್ಷಕ ಧರಣೇಂದ್ರ ಕುಮಾರ್ ವಂದಿಸಿದರು.