

ಸುಬ್ರಹ್ಮಣ್ಯ: ಸಮಾಜಮುಖಿಯಾದ ಸೇವಾ ಮನೋಭಾವನೆಯಿಂದ ಯುವ ಜನಾಂಗದ ಬದುಕಿನಲ್ಲಿ ಶಿಸ್ತಿನ ಔನ್ನತ್ಯ ಉಂಟಾಗುತ್ತದೆ. ಯುವ ಮನಸುಗಳು ಸದಾ ಸಾರ್ವಜನಿಕರಿಗೆ ಒಂದಲ್ಲ ಒಂದು ರೀತಿಯಾಗಿ ಸಹಕಾರ ಮಾಡುವ ಮನಸ್ಥಿತಿ ಹೊಂದಬೇಕಾದುದು ಅಗತ್ಯ ಎಂದು ಎಸ್‌ಎಸ್‌ಪಿಯು ಕಾಲೇಜಿನ ಪ್ರಾಚಾರ್ಯ ಸೋಮಶೇಖರ ನಾಯಕ್ ಹೇಳಿದರು.
ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತದ ಶ್ರೀ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜಿನ ರೋವರ್ಸ್ ರೇಂಜರ್ಸ್ ಘಟಕದ ಸೀನಿಯರ್ ರೋವರ್ಸ್ ರೇಂಜರ್ಸ್ ವಿದ್ಯಾರ್ಥಿಗಳಿಗೆ ಶನಿವಾರ ನಡೆದ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹಿರಿಯ ಉಪನ್ಯಾಸಕಿ ರೇಖಾರಾಣಿ ಸೋಮಶೇಖರ್, ವಿದ್ಯಾರ್ಥಿ ಸಂಘದ ಸಂಚಾಲಕ ಜಯಪ್ರಕಾಶ್ ಆರ್., ಉಪನ್ಯಾಸಕರಾದ ಯೋಗಣ್ಣ ಎಂ.ಎಸ್., ಸೌಮ್ಯಾ ದಿನೇಶ್, ಸೌಮ್ಯಾ ಕೀರ್ತಿ, ಶ್ರುತಿ, ರೇಂಜರ್ಸ್ ಲೀಡರ್ ಸವಿತಾ ಕೈಲಾಸ್, ರೋವರ್ಸ್ ಸ್ಕೌಟ್ ಲೀಡರ್ ಪ್ರವೀಣ್ ಎರ್ಮಾಯಿಲ್, ರೋವರ್ಸ್ ವಿದ್ಯಾರ್ಥಿ ನಾಯಕ ಜೀವನ್, ರೇಂಜರ್ಸ್ ವಿದ್ಯಾರ್ಥಿ ನಾಯಕಿ ರಶ್ಮಿ ಉಪಸ್ಥಿತರಿದ್ದರು.
ರೋವರ್ಸ್ ಮತ್ತು ರೇಂಜರ್ಸ್ ಘಟಕದಲ್ಲಿ ಸಾಧನೆ ಮಾಡಿದ ಮತ್ತು ಉತ್ತಮ ರೋವರ್ಸ್ ರೇಂಜರ್ಸ್ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ರೇಂಜರ್ಸ್ ಭೂಮಿಕಾ ಮಾನಾಡು ನಿರೂಪಿಸಿದರು. ರೇಂಜರ್ಸ್ ವಿದ್ಯಾರ್ಥಿ ನಾಯಕಿ ಕೃತಿಕಾ ಸ್ವಾಗತಿಸಿದರು, ರೇಂಜರ್ಸ್ ವಿದ್ಯಾರ್ಥಿ ನಾಯಕ ದಿಗಂತ್ ಕೊಂಡಾಲ ವಂದಿಸಿದರು.