

ಬದಿಯಡ್ಕ: ಭಾರತ ದೇಶ ವೇದ ಪ್ರಕಾಶವನ್ನು ಜಗದೆಡೆಗೆ ಪಸರಿಸಿದ ಪುಣ್ಯ ಭೂಮಿ. ಇಲ್ಲಿಯ ಧರ್ಮ ವೈವಿಧ್ಯಮಯ ಆಚರಣೆ ಮೂಲಕ ಸಕಲ ಜೀವರಾಶಿಗೂ ಒಳಿತನ್ನು ಸಾರಿ ಹೇಳಿದ ವಿಶಿಷ್ಟ ಆರಾಧ್ಯ ಋಷಿ ಪರಂಪರೆಯ ಹಿನ್ನೆಲೆಯದ್ದು, ಸತ್ಕರ್ಮದ ಧರ್ಮದ ಆಚರಣೆಯಿಂದ ವ್ಯಕ್ತಿ-ಶಕ್ತಿಯಾಗಿ ಬೆಳೆಯಲು ಕಾರಣವಾಗುತ್ತದೆ ಎಂದು ಶ್ರೀ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಹೇಳಿದರು.
ಏತಡ್ಕ ಶ್ರೀಸದಾಶಿವ ದೇವಾಲಯದಲ್ಲಿ ಮಂಗಳವಾರ ಆರಂಭಗೊಂಡ ಪುನಃ ಪ್ರತಿಷ್ಠಾಪನಾ ಬ್ರಹ್ಮಕಲಶೋತ್ಸವ ಅಂಗವಾಗಿ ಸಂಜೆ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಸದಾಶಯದ ಪ್ರಾರ್ಥನೆ ಸಮಾಜವನ್ನು ಉತ್ಕರ್ಷತೆಗೆ ಕೊಂಡೊಯ್ಯುತ್ತದೆ. ಸಕಲರಿಗೂ ಒಳಿತು ಬಯಸುವ ಸದಾಶಿವ ಕಲ್ಪನೆ ನಮ್ಮಲ್ಲಿ ಸಾಕಾರಗೊಳ್ಳುವ ಮೂಲಕ ಸ್ವತಃ ಸದಾಶಿವರಾಗಬೇಕು. ಇಂದು ಸಹೃದಯರ ಸಹಕಾರದೊಂದಿಗೆ ಆರಾಧನಾಲಯ ಅಭಿವೃದ್ಧಿಗೊಳ್ಳುತ್ತಿರುವುದು ಸನ್ಮಂಗಲಕರ ಸಮಾಜದ ಸೂಚಕವಾಗಿದೆ. ಪುಣ್ಯ ಕಾರ್ಯಗಳಲ್ಲಿ ಎಲ್ಲರ ಸಹಕಾರ ಸೋದರ ಭಾವ ಸ್ಪುರಣಗಳೊಂದಿಗೆ ಮಂಗಳಕರವಾಗಿರಲಿ ಎಂದು ಹಾರೈಸಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಕುಟುಂಬ ಪ್ರಬೋಧನ ರಾಷ್ಟ್ರೀಯ ಪ್ರಮುಖರಾದ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಧಾರ್ಮಿಕ ಉಪನ್ಯಾಸ ನೀಡಿ ಮಾತನಾಡಿ, ಕುಟುಂಬವೆಂದರೆ ತಲೆಮಾರುಗಳು ಜತೆಗೆ ಬದುಕುವ ವ್ಯವಸ್ಥೆಯಾಗಿದ್ದು, ಅಂದಿಂದು ಮರೀಚಿಕೆಯಾಗುತ್ತಿರುವುದು ಕಳವಳಕಾರಿ. ಕನಿಷ್ಠ ಮೂರು ಮಕ್ಕಳನ್ನು ಪರಿಪೋಶಿಸುವ ಧೈರ್ಯ ನಮ್ಮ ಧರ್ಮ ಕೈಗೆತ್ತಿಕೊಳ್ಳಬೇಕು. ತುಂಬು ಸಂಸಾರದ ಕುಟುಂಬದ ಮೂಲಕ ಮನೆ ಮಂತ್ರಾಲಯವಾಗಿ ಬದುಕಿನ ಸಾರ್ಥಕ್ಯಕ್ಕೆ ನೆಲೆಯೊದಗಿಸುತ್ತದೆ. ಸ್ವದೇಶಿ ಮಾನಸಿಕತೆ, ಜಾಗೃತಿ ನಮ್ಮದಾದಾಗ ನೆಮ್ಮದಿಯ ಮನೆ, ಸಮಾಜ ನಿರ್ಮಾಣ ಸಾಧ್ಯ ಎಂದರು.
ಹಿರಿಯ ಧಾರ್ಮಿಕ ಮುಂದಾಳು ವಸಂತ ಪೈ ಬದಿಯಡ್ಕ, ಧಾರ್ಮಿಕ, ಸಾಮಾಜಿಕ ಮುಂದಾಳು ಕೆ.ಕೆ.ಶೆಟ್ಟಿ ಮುಂಡಪ್ಪಳ್ಳ, ಗೌರವಾಧ್ಯಕ್ಷ ಡಾ.ವೈ.ಸುಬ್ರಾಯ ಭಟ್ ಮಾತನಾಡಿದರು. ಪುನಃ ಪ್ರತಿಷ್ಠಾಪನಾ ಬ್ರಹ್ಮಕಲಶ ಸಮಿತಿ ಅಧ್ಯಕ್ಷ ವೈ.ಶ್ಯಾಮ ಭಟ್ ಬೆಂಗಳೂರು ಸ್ವಾಗತಿಸಿದರು. ಸಂಚಾಲಕ ಚಂದ್ರಶೇಖರ ಏತಡ್ಕ ವಂದಿಸಿದರು. ರಮೇಶ್ ವೈ ಕಾರ್ಯಕ್ರಮ ನಿರೂಪಿಸಿದರು.
ದಾನಿಗಳ ನೆರವು
ದೇವಾಲಯದ ಪುನಃ ನಿರ್ಮಾಣದಲ್ಲಿ ಕಾರ್ಯನಿರ್ವಹಿಸಿದ ಶೇಖರ ಆಚಾರ್ಯ ಬಾಯಾರು, ದೀಕ್ಷಿತ್ ರೈ, ಜಗದೀಶ್ ಪೆರಡಾಲ ಮೊದಲಾದವರನ್ನು ಸನ್ಮಾನಿಸಲಾಯಿತು. ದೇವಾಲಯದ ಸುತ್ತುಪೌಳಿಗಳನ್ನು ವಿವಿಧ ದಾನಿಗಳ ನೆರವಿಂದ ನಿರ್ಮಿಸಲಾಗಿದೆ.
ಧಾರ್ಮಿಕ ಸಂಪ್ರದಾಯ ನಮ್ಮ ಜೀವನದ ಅನುಷ್ಠಾನದಲ್ಲಿರಬೇಕು. ಈ ಅನುಷ್ಠಾನದಿಂದ ಸಂಸ್ಕಾರ, ಸಂಸ್ಕೃತಿಗಳ ಜಾಗೃತಿ ಮೂಡಲು, ತನ್ಮೂಲಕ ಸಕಾರಾತ್ಮಕ ಬೆಳವಣಿಗೆ ಸಾಧ್ಯ. ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು, ತಂತ್ರಿವರ್ಯ https://www.vijayavani.net/shrinivas-v-v-6 https://www.vijayavani.net/speaker-u-t-khader-rushed-to-the-driver-aid