ಮೂಲ್ಕಿ: ವಿದ್ಯಾರ್ಥಿಗಳು ಸಮಗ್ರವಾಗಿ ತಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಕಾಲೇಜು ವಿದ್ಯಾರ್ಥಿ ಸಂಟನೆಗಳು ಕಾರ್ಯಸೂಚಿ ಕೈಗೊಳ್ಳಬೇಕು ಎಂದು ಭಾರತ್ ಬ್ಯಾಂಕ್ನ ನಿವೃತ್ತ ಡಿ.ಜಿ.ಎಂ.ಮೋಹನದಾಸ ಹೆಜಮಾಡಿ ಹೇಳಿದರು.
ಮೂಲ್ಕಿ ವಿಜಯ ಕಾಲೇಜಿನ 2024&25ರ ಶೈಕ್ಷಣಿಕ ವರ್ಷದ ಪಠ್ಯಪೂರಕ ಸಂಟನೆಗಳನ್ನು ಉದ್ಘಾಟಿಸಿ ಮಾತನಾಡಿದರು.
ಶ್ರೀ ವ್ಯಾಸ ಮಹರ್ಷಿ ವಿದ್ಯಾಪಿಠದ ಅಧ್ಯಕ್ಷ ಕುಲ್ಯಾಡಿ ನರಸಿಂಹ ಪೈ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣ ಮತ್ತು ಕ್ರೀಡೆಯನ್ನು ಸಮಾನವಾಗಿ ಬಳಸಿದಾಗ ಆರೋಗ್ಯವಂತರಾಗಿ ಬೌದ್ಧಿಕ ಉನ್ನತಿ ಕಂಡುಕೊಳ್ಳಲು ಸಾಧ್ಯವಿದೆ ಎಂದರು.
ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಪಮೀದ ಬೇಗಂ ಶುಭ ಹಾರೈಸಿದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ.ಶೈಲಜಾ ವೈ.ವಿ. ಪ್ರಮಾಣವಚನ ಬೋಧಿಸಿದರು. ಪ್ರಾಂಶುಪಾಲೆ ಡಾ.ಶ್ರೀಮಣಿ ಅಧ್ಯಕ್ಷತೆ ವಹಿಸಿದ್ದರು.
ರೋಶನಿ ಪ್ರಾರ್ಥಿಸಿದರು. ಸ್ವಾತಿ ಸ್ವಾಗತಿಸಿದರು. ಅಕ್ಷಯ್ ಹಾಗೂ ಪ್ರತಿಾ ಅತಿಥಿಗಳನ್ನು ಪರಿಚಯಿಸಿದರು. ಶೀತಲ್ ವಂದಿಸಿದರು. ಹರ್ಷಿತಾ ಕಾರ್ಯಕ್ರಮ ನಿರೂಪಿಸಿದರು.