ಜಿಲ್ಲೆ

ಸಾಮರಸ್ಯ ಚಿಂತನೆಯೊಂದಿಗೆ ಸಮಾಜ ಸೇವೆ : ಡಾ.ಹರಿಕೃಷ್ಣ ಪುನರೂರು ಹೇಳಿಕೆ

ಮೂಲ್ಕಿ: ವಿಶ್ವಮಟ್ಟದಲ್ಲಿ ಶೈಕ್ಷಣಿಕ ವಿಚಾರಗಳ ಜೀವನ ಕೌಶಲ, ಸಾಮರಸ್ಯ ಚಿಂತನೆ ಸಮಾಜ ಸೇವೆಯ ಮನಸ್ಸು ಮತ್ತು ಶ್ರಮದಿಂದ ಕೂಡಿದ ಬದುಕು ಕಲಿಸುವಲ್ಲಿ ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಆಂದೋಲನ ಪರಿಣಾಮಕಾರಿ ಎಂದು ರಾಜ್ಯ ಕನ್ನಡ ಸಾಹಿತ್ಯ ಪರಿಷತ್ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಡಾ.ಹರಿಕೃಷ್ಣ ಪುನರೂರು ಹೇಳಿದರು.

ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಮೂಲ್ಕಿ ಸ್ಥಳೀಯ ಸಂಸ್ಥೆಯ ವಾರ್ಷಿಕ ಅಧಿವೇಶನವನ್ನು ಉದ್ಘಾಟಿಸಿ ಮಾತನಾಡಿದರು.

ರಾಜ್ಯ ಆಯುಕ್ತರಾಗಿ ಮಾಜಿ ಸಚಿವ ಪಿ.ಜಿ.ಆರ್.ಸಿಂದ್ಯಾ ಅವರ ನಾಯಕತ್ವದಡಿ ಹೊಸ ಸ್ಕೌಟ್ಸ್ ಸಂಘಟನೆಯಲ್ಲಿ ಸಂಚಲನ ಮೂಡಿಸಿದ ಸ್ಕೌಟ್ಸ್ ಸಂಸ್ಥೆ ರಾಜ್ಯದೆಲ್ಲೆಡೆ ಹೊಸ ಚಿಂತನೆಗಳ ಮೂಲಕ ವಿದ್ಯಾರ್ಥಿಗಳ ಬದುಕು ರೂಪಿಸುವ ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಮಾದರಿಯಾಗಿ ಬೆಳೆದು ನಿಂತಿದೆ ಎಂದರು.

ರಾಜ್ಯ ಸಹಾಯಕ ಸಂಘಟಕ ಭರತ್ ರಾಜ್, ಉಪಾಧ್ಯಕ್ಷೆ ಸರೋಜಿನಿ ಸುವರ್ಣ ಮಾತನಾಡಿದರು. ಮೂಲ್ಕಿ ಸ್ಥಳೀಯ ಸಂಸ್ಥೆ ಅಧ್ಯಕ್ಷ ಎಂ.ಸರ್ವೋತ್ತಮ ಅಂಚನ್ ಅಧ್ಯಕ್ಷತೆ ವಹಿಸಿದ್ದರು.

ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ಹರಿಶ್ಚಂದ್ರ ವರದಿ ನೀಡಿ ಕಾರ್ಯಕ್ರಮ ನಿರೂಪಿಸಿದರು. ಕಿಲ್ಪಾಡಿ ಶ್ರೀ ವ್ಯಾಸ ಮಹರ್ಷಿ ಆಂಗ್ಲ ಮಾದ್ಯಮ ಶಾಲೆ ಮುಖ್ಯ ಶಿಕ್ಷಕಿ ಕಾಮಾಕ್ಷಿ ಆರ್.ನಾಯಕ್ ಸ್ವಾಗತಿಸಿದರು. ಮೂಲ್ಕಿ ಶ್ರೀ ನಾರಾಯಣಗುರು ಆಂಗ್ಲಮಾಧ್ಯಮ ಶಾಲೆ ಮುಖ್ಯ ಶಿಕ್ಷಕಿ ಗೀತಾ ಶೆಟ್ಟಿ ವಂದಿಸಿದರು.

ಮೂಲ್ಕಿ ಸ್ಥಳೀಯ ಸಂಸ್ಥೆಯ ಮೂಲಕ ನಡೆಸಲಾದ ಹಲವು ಕಾರ್ಯಕ್ರಮಗಳು ಅದರಲ್ಲೂ ರಾಷ್ಟ್ರಮಟ್ಟದ ಸಮುದ್ರ ಸಾಹಸ ಶಿಬಿರ (ವಾಟರ್ ರಿಗೇಟಾ) ರಾಷ್ಟ್ರಮಟ್ಟದ ದಾಖಲೆ ಸ್ಥಾಪಿಸಿದೆ. ಮೂಲ್ಕಿ ಘಟಕದ ಶಿಕ್ಷಣ ಸಂಸ್ಥೆಗಳ ಶಿಕ್ಷಕರ ಸೇವೆ ಅತ್ಯಂತ ಮಹತ್ವದ್ದು ಹಾಗೂ ಈ ಘಟಕ ರಾಜ್ಯ ಸಂಸ್ಥೆ ಗೌರವಕ್ಕೆ ಪಾತ್ರವಾಗಿದೆ. ಭರತ್ ರಾಜ್, ರಾಜ್ಯ ಸಹಾಯಕ ಸಂಘಟಕ