ಜಿಲ್ಲೆ

ಆಳ್ವಾಸ್ ಪಿಯು ಕಾಲೇಜು ಪ್ರಥಮ : ಬಾಲಕಿಯರ ಕಬಡ್ಡಿ ಟೂರ್ನಿ ಉಜಿರೆ ಎಸ್‌ಡಿಎಂ ದ್ವಿತೀಯ

ಸೌಮ್ಯ ಆರ್

ಬೆಳ್ತಂಗಡಿ: ಉಜಿರೆ ಎಸ್.ಡಿ.ಎಂ. ಕಾಲೇಜಿನ ಇಂದ್ರಪ್ರಸ್ಥ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪದವಿಪೂರ್ವ ಕಾಲೇಜುಗಳ ದಕ್ಷಿಣ ಕನ್ನಡ ಜಿಲ್ಲಾಮಟ್ಟದ ಬಾಲಕಿಯರ ಕಬಡ್ಡಿ ಟೂರ್ನಿಯಲ್ಲಿ ಮೂಡುಬಿದಿರೆ ಆಳ್ವಾಸ್ ಪದವಿಪೂರ್ವ ಕಾಲೇಜಿನ ಬಾಲಕಿಯರ ತಂಡ ಪ್ರಥಮ ಸ್ಥಾನ ಗಳಿಸಿದೆ.

ಪ್ರಥಮ ಸ್ಥಾನ ಪಡೆದ ಮೂಡುಬಿದಿರೆಯ ಆಳ್ವಾಸ್ ಪದವಿಪೂರ್ವ ಕಾಲೇಜಿನ ಬಾಲಕಿಯರ ತಂಡ.

ಆತಿಥೇಯ ಉಜಿರೆಯ ಎಸ್.ಡಿ.ಎಂ. ಪದವಿಪೂರ್ವ ಕಾಲೇಜು ತಂಡ (ದ್ವಿತೀಯ), ಉತ್ತಮ ರೈಡರ್-ಬಿಂದು, ಎಸ್.ಡಿ.ಎಂ. ಪಿ.ಯು. ಕಾಲೇಜು ಉಜಿರೆ, ಆಲ್ ರೌಂಡರ್- ಪ್ರಾನ್ವಿಕ, ಆಳ್ವಾಸ್ ಪಿ.ಯು. ಕಾಲೇಜು ಮೂಡುಬಿದಿರೆ, ಉತ್ತಮ ಕ್ಯಾಚರ್-ವಂಶಿಕ, ಆಳ್ವಾಸ್ ಪಿ.ಯು. ಕಾಲೇಜು ಮೂಡುಬಿದಿರೆ. ಸೋನಿಯಾವರ್ಮ ವಿಜೇತರಿಗೆ ಬಹುಮಾನ ವಿತರಿಸಿ ಶುಭ ಹಾರೈಸಿದರು.

ದ್ವಿತೀಯ ಸ್ಥಾನ ಪಡೆದ ಉಜಿರೆಯ ಎಸ್.ಡಿ.ಎಂ. ಪದವಿಪೂರ್ವ ಕಾಲೇಜು ತಂಡ.

ಎಸ್.ಡಿ.ಎಂ. ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ.ಬಿ.ಪ್ರಮೋದ್ ಕುಮಾರ್, ಉಪಪ್ರಾಂಶುಪಾಲ ರಾಜೇಶ್ ಕೆ. ಉಪನ್ಯಾಸಕಿ ಅಂಕಿತ ಗೌಡ, ಕಬಡ್ಡಿ ತರಬೇತುದಾರ ಕೃಷ್ಣಾನಂದ ರಾವ್, ದೈಹಿಕ ಶಿಕ್ಷಣ ನಿರ್ದೇಶಕ ಸಂದೇಶ್ ಪೂಂಜ ಉಪಸ್ಥಿತರಿದ್ದರು.