ಆರೋಗ್ಯ ಶಿಬಿರದಂತಹ ಸೇವೆ ಅನನ್ಯ :ಮೂಲ್ಕಿ ಸೀಮೆ ಅರಸರಾದ ಎಂ. ದುಗ್ಗಣ್ಣ ಸಾವಂತ ಶ್ಲಾಘನೆ

health camp
Published on

ವಿಜಯವಾಣಿ ಸುದ್ದಿಜಾಲ ಮೂಲ್ಕಿ

ಗ್ರಾಮದ ಬಡ ಜನರಿಗೆ ಉತ್ತಮ ಆರೋಗ್ಯ ಹಾಗೂ ನೆಮ್ಮದಿ ನೀಡುವ ಉಚಿತ ಆರೋಗ್ಯ ರಕ್ಷಣಾ ಶಿಬಿರಗಳ ನಿರ್ವಹಣೆ ಮೂಲಕ ಸೇವಾ ಸಂಸ್ಥೆಗಳ ಕಾರ್ಯದಕ್ಷತೆ ಅಭಿನಂದನೀಯ ಎಂದು ಮೂಲ್ಕಿ ಸೀಮೆ ಅರಸರಾದ ಎಂ.ದುಗ್ಗಣ್ಣ ಸಾವಂತ ಹೇಳಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್, ಹತ್ತನೇ ತೋಕೂರು ಮತ್ತು ಪಡುಪಣಂಬೂರು ಬೆಳ್ಳಾಯರು ಒಕ್ಕೂಟ, ಶ್ರೀ ವೀರಭದ್ರ ಮಹಾಮಾಯಿ ವಾಚನಾಲಯ ಮತ್ತು ಯುವಕ ಮಂಡಲ, ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಸ್ಥಾನದ ಮಹಿಳಾ ವೇದಿಕೆ ಹಾಗೂ ದೇರಳಕಟ್ಟೆ ಎ.ಬಿ.ಶೆಟ್ಟಿ ಮೆಮೊರಿಯಲ್ ಇನ್‌ಸ್ಟಿಟ್ಯೂಟ್ ಡೆಂಟಲ್ ಸೈನ್ಸ್, ಕೆ.ಎಸ್.ಹೆಗ್ಡೆ ಆಸ್ಪತ್ರೆ ಸಹಕಾರದೊಂದಿಗೆ ಕಲ್ಲಾಪುವಿನಲ್ಲಿ ಆಯೋಜಿಸಲಾದ ಆರೋಗ್ಯ ಉಚಿತ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಜ್ಪೆ ವಲಯದ ಯೋಜನಾಧಿಕಾರಿ ಕರುಣಾಕರ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಕಲ್ಲಾಪು ಶ್ರೀ ವೀರಭದ್ರ ಮಹಾಮ್ಮಾಯಿ ದೇವಸ್ಥಾನದ ಗುರಿಕಾರ ಕಾಂತಣ್ಣ ಗುರಿಕಾರ್, ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಲೋಲಾಧರ್ ಶೆಟ್ಟಿಗಾರ್, ಯುವಕ ಮಂಡಲ ಅಧ್ಯಕ್ಷ ಹರಿಪ್ರಸಾದ್, ಮಹಿಳಾ ವೇದಿಕೆ ಅಧ್ಯಕ್ಷೆ ವೇದಾವತಿ ಎಚ್.ಶೆಟ್ಟಿಗಾರ್, ಸೇವಾ ಪ್ರತಿನಿಧಿ ಸವಿತಾ ಶರತ್ ಬೆಳ್ಳಾಯರು, ಮೂಲ್ಕಿ ವಲಯ ಮೇಲ್ವಿಚಾರಕಿ ನಿಶ್ಮಿತಾ ಶೆಟ್ಟಿ, ವೈದ್ಯಾಧಿಕಾರಿ ಸಂಜನ್, ಡಾ.ಬಾಲಚಂದ್ರ, ಡಾ.ಗೋಕುಲ್ ಸುರೇಶ್, 10ನೇ ತೋಕೂರು ಒಕ್ಕೂಟ ಅಧ್ಯಕ್ಷ ಮನೋಹರ್ ಜಿ.ಕುಂದರ್, ಬೆಳ್ಳಾಯರು ಸೇವಾ ಒಕ್ಕೂಟ ಅಧ್ಯಕ್ಷೆ ಚಂಪಾ ಮತ್ತಿತರರು ಉಪಸ್ಥಿತರಿದ್ದರು. ಸೇವಾ ಪ್ರತಿನಿಧಿ ಸವಿತಾ ಶರತ್ ಸ್ವಾಗತಿಸಿದರು. ಭವ್ಯ ವಂದಿಸಿದರು. ರಾಜೇಶ್ವರಿ ಕಲ್ಲಾಪು ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net