ಜಿಲ್ಲೆ

ಕುಂಜತ್ತೂರಲ್ಲಿ ಹಳೇ ವಿದ್ಯಾರ್ಥಿಗಳ ಸ್ನೇಹಕೂಟ

Avinash R

ಮಂಜೇಶ್ವರ: ಜಿವಿಎಚ್‌ಎಸ್‌ಎಸ್ ಕುಂಜತ್ತೂರು ಶಾಲೆಯ 1991-92ನೇ ಸಾಲಿನ 10ನೇ ತರಗತಿಯ ವಿದ್ಯಾರ್ಥಿಗಳ ಸ್ನೇಹಕೂಟ ಹಾಗೂ ಗುರು ವಂದನಾ ಕಾರ್ಯಕ್ರಮ ಶಾಲೆಯಲ್ಲಿ ನಡೆಯಿತು.

ಮುಖ್ಯಅತಿಥಿ ಅಕ್ಷರ ಸಂತ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರನ್ನು ಸನ್ಮಾನಿಸಲಾಯಿತು. ಬಾಯಾರು ಗ್ರಾಮಾಧಿಕಾರಿ ಶಂಕರ ಕುಂಜತ್ತೂರು ಅಧ್ಯಕ್ಷತೆ ವಹಿಸಿದ್ದರು. ಕುಂಜತ್ತೂರು ಜಿವಿಎಚ್‌ಎಸ್‌ಎಸ್ ಮುಖ್ಯಶಿಕ್ಷಕ ಬಾಲಕೃಷ್ಣ ಜಿ.ಉದ್ಘಾಟಿಸಿದರು. ಕಲಿಸಿದ ಗುರುಗಳನ್ನು ಸನ್ಮಾನಿಸಲಾಯಿತು.

ಶಾಲೆಯಲ್ಲಿ 2024ನೇ ಸಾಲಿನ ಹತ್ತನೇ ತರಗತಿಯಲ್ಲಿ ಅತ್ಯಧಿಕ ಅಂಕಗಳೊಂದಿಗೆ ತೇರ್ಗಡೆಯಾದ ಫಾತಿಮಾತ್ ಅನಾ ಮತ್ತು ಶಮನಜ್ ಕೆ.ಅವರನ್ನು ಸ್ಮರಣಿಕೆ ಹಾಗೂ ನಗದು ನೀಡಿ ಗೌರವಿಸಲಾಯಿತು. ಸ್ನೇಹಕೂಟದ ಸವಿನೆನಪಿಗಾಗಿ ಶಾಲೆಗೆ ಶುದ್ಧ ಕುಡಿಯುವ ನೀರಿನ ಕೋಲ್ಡ್ ವಾಟರ್ ಫಿಲ್ಟರ್ ಯಂತ್ರ ಕೊಡುಗೆಯಾಗಿ ನೀಡಲಾಯಿತು.

ಸ್ನೇಹಕೂಟದಲ್ಲಿ 75 ಮಂದಿ ಹಳೇ ವಿದ್ಯಾರ್ಥಿಗಳು ಹಾಗೂ 16 ಶಿಕ್ಷಕರು ಭಾಗವಹಿಸಿದ್ದರು. ಮೋಹಿತ್ ನಿರೂಪಿಸಿದರು. ಗಣೇಶ ಬಿ.ಸ್ವಾಗತಿಸಿ, ಮೊದೀನ್ ಕುಟ್ಟಿ ವಂದಿಸಿದರು.

ಕಾರ್ಯಕ್ರಮದ ಮುಖ್ಯ ಸಂಯೋಜಕರಾದ ದಿವಾಕರ್ ಶೆಟ್ಟಿ, ಲವೀನಾ ಕೆ., ಉಸ್ಮಾನ್ ಖಾದರ್, ಬಷೀರ್ ಉದ್ಯಾವರ, ಇಬ್ರಾಹಿಂ ಎಸ್, ಹಕೀಮ್, ಸಾದತ್, ಸುಜಿತ್ ಬಿ.ಎಂ., ಮುನೀರ್ ಎಂ.ಕೆ., ಅಬ್ದುಲ್ ಖಾದರ್, ಶ್ರೀಧರ ಪಟ್ನಾ, ಮಜೀದ್, ಜೈನಾಬಿ ಉಪಸ್ಥಿತರಿದ್ದರು. ಅರಬ್ ರಾಷ್ಟ್ರಗಳಿಂದ, ಬೆಂಗಳೂರು, ಕೋಲ್ಕತ ಹಾಗೂ ಇತರ ದೂರದ ಊರುಗಳಿಂದ ಹಲವಾರು ಹಳೇ ವಿದ್ಯಾರ್ಥಿಗಳು ಆಗಮಿಸಿದ್ದರು.