ತಿಂಗಳ ಉಪನ್ಯಾಸ ಅರಿವು ತಿಳಿವು ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕ ಅನೀಶ ಮುಳಿಯಾಲ ಮಾತನಾಡಿದರು 
ಜಿಲ್ಲೆ

ಆತ್ಮಜ್ಞಾನ ಬೋಧಿಸುವ ಐತರೇಯ ಉಪನಿಷತ್ : ಅನೀಶ ಮುಳಿಯಾಲ

ಇಂದಿರಾ ಎನ್ ಕೆ

ಕಾರ್ಕಳ: ಐತರೇಯ ಉಪನಿಷತ್ ಮೂರು ಅಧ್ಯಾಯಗಳಿರುವ ಆತ್ಮಜ್ಞಾನ ಬೋಧಿಸುವ ಮಹತ್ವದ ಉಪನಿಷತ್ತಾಗಿದೆ ಎಂದು ಸಂಸ್ಕೃತ ವಿದ್ವಾಂಸ ಹಾಗೂ ಪ್ರಾಧ್ಯಾಪಕ ಅನೀಶ ಮುಳಿಯಾಲ ಹೇಳಿದರು. ಕನ್ನಡ ಸಂಘ ಕಾಂತಾವರ, ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಕಳ ಸಮಿತಿ ಮತ್ತು ಅಲ್ಲಮಪ್ರಭು ಪೀಠ ಕಾಂತಾವರ ಸಹಯೋಗದಲ್ಲಿ ಕಾರ್ಕಳದಲ್ಲಿ ತಿಂಗಳ ಉಪನ್ಯಾಸ ಅರಿವು ತಿಳಿವು ಕಾರ್ಯಕ್ರಮದಲ್ಲಿ ಐತರೇಯ ಉಪನಿಷತ್ ಕುರಿತು ಉಪನ್ಯಾಸ ನೀಡಿ ಮಾತನಾಡಿದರು.

ಸಮುದ್ರದ ಅಲೆಗಳಂತೆ ಪಂಚೇಂದ್ರಿಯಗಳ ಬಯಕೆಗಳಿಗೆ ಕೊನೆಯೆಂಬುದಿಲ್ಲ. ಯೋಗ್ಯ ಗುರುವಿನ ಮಾರ್ಗದರ್ಶನ ದೊರಕಿದಲ್ಲಿ ಪೂರ್ಣಜ್ಞಾನವೆಂಬ ಹಡಗನ್ನೇರಿ ಸಂಸಾರವೆಂಬ ಸಾಗರದಿಂದ ಪಾರಾಗಿ ದಡಸೇರಿ ಮೋಕ್ಷ ಪದ ಪಡೆಯಬಹುದಾಗಿದೆ. ಅಂತಃಕರಣ ರೂಪದಲ್ಲಿ ಪರಮಾತ್ಮ ನಮ್ಮೊಳಗಿದ್ದು, ಆತನ ಉಪಾಸನೆಯಿಂದ ಆತ್ಮಜ್ಞಾನ ಹೊಂದಿ ಮುಕ್ತರಾಗುವ ಮಾರ್ಗ ಉಪನಿಷತ್ತು ನಮಗೆ ತೋರಿಸುತ್ತದೆ ಎಂದರು.

ಡಾ.ನಾ.ಮೊಗಸಾಲೆ, ನಿತ್ಯಾನಂದ ಪೈ, ಏರ್ ವೈಸ್ ಮಾರ್ಷಲ್ ರಮೇಶ್ ಕಾರ್ಣಿಕ್, ಕಾರ್ಕಳ ತಾಲೂಕು ಹಿರಿಯ ನಾಗರಿಕರ ಸಂಘ ಅಧ್ಯಕ್ಷ ಕಮಲಾಕ್ಷ ಕಾಮತ್, ಉಪಾಧ್ಯಕ್ಷ ಮೋಹನದಾಸ ಪೈ ಉಪಸ್ಥಿತರಿದ್ದರು. ಕಾರ್ಯಕ್ರಮದ ಪ್ರಾಯೋಜಕತ್ವ ಕಾರ್ಕಳ ತಾಲೂಕು ಹಿರಿಯ ನಾಗರಿಕರ ಸಂಘ ವಹಿಸಿಕೊಂಡಿದ್ದು, ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು. ಗೀತಾ ಜಿ.ಮಲ್ಯ ಪ್ರಾರ್ಥಿಸಿ, ಜಗದೀಶ ಗೋಖಲೆ ಅತಿಥಿಗಳನ್ನು ಪರಿಚಯಿಸಿದರು. ಶೈಲಜಾ ಹೆಗ್ಡೆ ನಿರೂಪಿಸಿ. ಸದಾನಂದ ನಾರಾವಿ ಸ್ವಾಗತಿಸಿ, ಪ್ರದೀಪ್ ನಾಯಕ್ ವಂದಿಸಿದರು.