ಜಿಲ್ಲೆ

28, 29ರಂದು ಕೃಷಿ ಮೇಳ

ಇಂದಿರಾ ಎನ್ ಕೆ

ಪಡುಬಿದ್ರಿ: ಸಾವಯವ ಕೃಷಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪಡುಬಿದ್ರಿ ಉದಯಾದ್ರಿ ಬಾಲಗಣಪತಿ ಪ್ರಸನ್ನ ಪಾರ್ವತಿ ದೇವಸ್ಥಾನ ಸಹಯೋಗದಲ್ಲಿ ಡಿ.28 ಮತ್ತು 29ರಂದು ಕೃಷಿ ಮೇಳ ಆಯೋಜಿಸಲಾಗಿದೆ ಎಂದು ಸಂಘಟಕಿ ರಕ್ಷಾ ಹೇಳಿದರು. ನವೀನಚಂದ್ರ ಜೆ ಶೆಟ್ಟಿ ಹಾಗೂ ಶಶಿಕಾಂತ ಪಡುಬಿದ್ರಿ ಮೇಳ ಉದ್ಘಾಟಿಸಲಿದ್ದು, ಸಮಾರೋಪದಲ್ಲಿ ಸಂತೋಷ್‌ಕುಮಾರ್ ಶೆಟ್ಟಿ ದಂಪತಿ ಭಾಗವಹಿಸಲಿದ್ದಾರೆ. ಮೇಳದಲ್ಲಿ ಕೃಷಿ, ತೋಟಗಾರಿಕೆ, ಆಹಾರ, ಯಂತ್ರೋಪಕರಣಗಳ ಸಹಿತ 70 ಪ್ರದರ್ಶನ ಮತ್ತು ಮಾರಾಟ ಮಳಿಗೆಗಳು ಇರಲಿವೆ. ಬೆಳಗ್ಗೆ 9ರಿಂದ ರಾತ್ರಿ 9ರವರೆಗೆ ಮಳಿಗೆಗಳು ತೆರೆದಿರಲಿವೆ. ಸಂಘಟಕರಾದ ಪಿ.ಡಿ.ಶೇಖರ ರಾವ್, ಚರಣ್‌ರಾಜ್, ದಿನಕರ ರಾವ್, ನಯನಾಭಿರಾಮ ಸ್ವಾಮಿ ಉಪಸ್ಥಿತರಿದ್ದರು.