ಕೋಟದಲ್ಲಿ ಪಂಚವರ್ಣ ಸಂಸ್ಥೆಯ ಪರಿಸರಸ್ನೇಹಿ ಕಾರ್ಯಕ್ರಮಕ್ಕೆ ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ್ ಶೆಣೈ ಚಾಲನೆ ನೀಡಿದರು. ದಿನೇಶ್ ಪೂಜಾರಿ, ಅಜಿತ್ ಆಚಾರ್ ಮೊದಲಾದವರಿದ್ದರು. 
ಜಿಲ್ಲೆ

ಪಂಚವರ್ಣ ಸಂಸ್ಥೆಯಿಂದ ಕ್ರೀಯಾಶೀಲ ಕಾರ್ಯ

ಇಂದಿರಾ ಎನ್ ಕೆ

ಕೋಟ: ಪಂಚವರ್ಣ ಸಂಸ್ಥೆಯ ಕ್ರೀಯಾಶೀಲತೆ ಅದೇ ಸಂಸ್ಥೆಯ ಸೇವಾ ಕಾರ್ಯಕ್ಕೆ ಸಾಕ್ಷಿಯಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಶ್ರೀ ಶೆಣೈ ಹೇಳಿದರು.

ಕೋಟದ ಪಂಚವರ್ಣ ಯುವಕ ಮಂಡಲ, ಪಂಚವರ್ಣ ಮಹಿಳಾ ಮಂಡಲ ನೇತೃತ್ವದಲ್ಲಿ ಮಣೂರು ಫ್ರೆಂಡ್ಸ್, ಹಂದಟ್ಟು ಮಹಿಳಾ ಬಳಗ, ವಿಪ್ರ ಮಹಿಳಾ ಬಳಗ, ಸಕಡ್ ಫೌಂಡೇಶನ್ ಸಹಯೋಗದೊಂದಿಗೆ ತುಳಸಿಗಿಡ ನೆಡುವ ತುಳಸಿ ಆರಾಧನೆ ಶೀರ್ಷಿಕೆಯಡಿ 228ನೇ ಭಾನುವಾರ ಪರಿಸರಸ್ನೇಹಿ ಅಭಿಯಾನದಲ್ಲಿ ಮಾತನಾಡಿದರು. ಕೃಷಿಕ ದಿನೇಶ್ ಪೂಜಾರಿ ಹರ್ತಟ್ಟು, ಪಂಚವರ್ಣ ಯುವಕ ಮಂಡಲ ಅಧ್ಯಕ್ಷ ಅಜಿತ್ ಆಚಾರ್, ಪಂಚವರ್ಣ ಮಹಿಳಾ ಮಂಡಲ ಅಧ್ಯಕ್ಷೆ ಲಲಿತಾ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.