ಜಿಲ್ಲೆ

ಬೀದಿದೀಪದ ಕಂಬಗಳಿಗೆ ಟಿಪ್ಪರ್​ ಡಿಕ್ಕಿ

Avinash R

ಗುರುಪುರ: ಮಂಗಳೂರು ಬಜ್ಪೆ ರಾಜ್ಯ ಹೆದ್ದಾರಿಯ ಕೆಂಜಾರು ಶ್ರೀ ದೇವಿ ಕಾಲೇಜಿನ ಬಳಿ ಶುಕ್ರವಾರ ಅಪರಾಹ್ನ 3 ಗಂಟೆಗೆ ಟಿಪ್ಪರ್​ ಲಾರಿಯೊಂದು ಏಕಾಏಕಿ ರಸ್ತೆ ಬಿಟ್ಟು ಡಿವೈಡರ್​ ಏರಿದ ಪರಿಣಾಮ ಅಲ್ಲಿದ್ದ ಬೀದಿ ದೀಪದ ಕಂಬಗಳು ಮುರಿದಿವೆ.

ಘಟನೆ ವೇಳೆ ದ್ವಿಚಕ್ರ ವಾಹನ ಸವಾರರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಮಂಗಳೂರು ಕಡೆಯಿಂದ ಬರುತ್ತಿದ್ದ ಟಿಪ್ಪರ್​ ಕಾಲೇಜಿನ ಬಳಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್​ಗೆ ಏರಿದೆ. ಈ ವೇಳೆ ಡಿವೈಡರ್​ಗೆ ಅಳವಡಿಸಲಾಗಿದ್ದ 2 ಹೊಸ ವಿದ್ಯುತ್​ ಕಂಬಗಳು ಮುರಿದಿವೆ.

ಘಟನೆ ವೇಳೆ ವಿರುದ್ಧ ದಿಕ್ಕಿನಿಂದ ಮಂಗಳೂರಿನತ್ತ ಸಾಗುತ್ತಿದ್ದ ದ್ವಿಚಕ್ರ ಸವಾರರು ಬೀಳುತ್ತಿದ್ದ ಕಂಬಗಳಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.