ಜಿಲ್ಲೆ

ಹೊಸಪೇಟೆ ಸಬ್​ರಿಜಿಸ್ಟ್ರಾರ್ ಕಚೇರಿ, ಮನೆ ಮೇಲೆ ಎಸಿಬಿ ದಾಳಿ!

ಹೊಸಪೇಟೆ ( ಬಳ್ಳಾರಿ) : ಹೊಸಪೇಟೆಯ ಸಬ್​ ರಿಜಿಸ್ಟ್ರಾರ್ ಪ್ರಭಾಕರ ಅವರ ಕಚೇರಿ ಮತ್ತು ಮನೆಗಳ ಮೇಲೆ ಇಂದು ಬೆಳಗ್ಗೆಯೇ ಎಸಿಬಿ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಪ್ರಭಾಕರ ಅವರ ವಿರುದ್ಧ ಭ್ರಷ್ಟಾಚಾರದ ಆರೋಪ ವ್ಯಾಪಕವಾಗಿದ್ದು, ಕೆಲವರು ದೂರು ದಾಖಲಿಸಿದ್ದರು ಎಂದು ಮೂಲಗಳು ತಿಳಿಸಿವೆ.

ಎಸಿಬಿ ಡಿವೈಎಸ್ಪಿ ಚಂದ್ರಕಾಂತ ಪೂಜಾರಿ ನೇತೃತ್ವದಲ್ಲಿ ದಾಳಿ ನಡೆದಿದೆ. ಹೊಸಪೇಟೆಯಲ್ಲಿರೋ ಕಚೇರಿ ಮನೆ ಮತ್ತು ಕೂಡ್ಲಿಗಿ ತಾಲೂಕಿನ ಮನೆ ಮತ್ತು ಫಾರ್ಮ್ ಹೌಸ್​ನಲ್ಲಿ ಸಂಬಂಧಪಟ್ಟ ದಾಖಲೆಗಳು, ಸಾಕ್ಷ್ಯಗಳಿಗಾಗಿ ಅಧಿಕಾರಿಗಳ ತಂಡ ಶೋಧಕಾರ್ಯ ನಡೆಸಿದೆ.

ಅಕ್ರಮ ಅಸ್ತಿ ಗಳಿಕೆ ಆರೋಪದ ಜೊತೆ ಅನಧಿಕೃತವಾಗಿ ಕೆಲ ಆಸ್ತಿಗಳನ್ನು ರಿಜಿಸ್ಟರ್ ಮಾಡಿಕೊಟ್ಟಿರೋ ಆರೋಪ ಪ್ರಭಾಕರ ಅವರ ವಿರುದ್ಧ ಇದೆ. ಏಕಕಾಲದಲ್ಲೇ ನಾಲ್ಕು ಕಡೆ ದಾಳಿ ನಡೆದಿದೆ. ಕೂಡ್ಲಿಗಿ ತಾಲೂಕಿನ ವೀರಾಪುರ ಗ್ರಾಮದ ಫಾರಂ ಹೌಸ್​ನಲ್ಲೂ ಅಧಿಕಾರಿಗಳ ತಂಡ ಶೋಧ ಕಾರ್ಯ ನಡೆಸಿದೆ. ಎಸಿಬಿ ಇನ್​ಸ್ಪೆಕ್ಟರ್ ಹನುಮಂತಪ್ಪ ಸಣ್ಣಮನಿ ನೇತೃತ್ವ ತಂಡ ಇಲ್ಲಿದೆ. (ದಿಗ್ವಿಜಯ ನ್ಯೂಸ್)

ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..