ಜಿಲ್ಲೆ

ಎಸಿಬಿ ದಾಳಿ: ಹೆಸ್ಕಾಂ ನೌಕರನ ಐಷಾರಾಮಿ ಮನೆಯಲ್ಲಿ ಲಿಫ್ಟ್​ ಕೂಡ ಇದೆ!

rashmirhebbur

ಬೆಳಗಾವಿ: ರಾಜ್ಯಾದ್ಯಂತ ನಡೆಯುತ್ತಿರುವ ಎಸಿಬಿ ದಾಳಿಯ ಅಂಗವಾಗಿ ಬೆಳಗಾವಿಯಲ್ಲಿ ಹೆಸ್ಕಾಂ ಸಿ ಗ್ರೂಪ್ ನೌಕರ ನಾತಾಜಿ ಪಾಟೀಲ್ ನಿವಾಸಕ್ಕೆ ಎಸಿಬಿ ಅಧಿಕಾರಿಗಳು ತೆರಳಿದ್ದಾರೆ. ಸಂಜೆಯವರೆಗೂ ಪರಿಶೀಲನೆ ನಡೆಯಲಿದ್ದು, ಬಳಿಕ ಪೂರ್ಣ ಮಾಹಿತಿ ನೀಡುವುದಾಗಿ ಬೆಳಗಾವಿ ಉತ್ತರ ವಲಯ ಎಸ್‌ಪಿ ಬಿ.ಎಸ್.ನ್ಯಾಮಗೌಡ ಹೇಳಿದ್ದಾರೆ.

ಎಸಿಬಿ ಇನ್ಸ್​ಪೆಕ್ಟರ್ ಸುನೀಲ್ ಕುಮಾರ್ ಹುಲಮನಿ ನೇತೃತ್ವದಲ್ಲಿ ನಿವಾಸದ ಪ್ರತಿಯೊಂದು ಕೋಣೆಯನ್ನೂ ಜಾಲಾಡುತ್ತಿದ್ದು, ದಾಖಲಾತಿಗಳ ಕೂಲಂಕಷ ಪರಿಶೀಲನೆ ನಡೆಯುತ್ತಿದೆ. ಬೆಳಗಾವಿಯ ವೈಭವ ನಗರದಲ್ಲಿರುವ ನಾತಾಜಿ ಅವರ ಐಷಾರಾಮಿ ಮೂರು ಅಂತಸ್ತಿನ ಕಟ್ಟಡಕ್ಕೆ ಲಿಫ್ಟ್​ ವ್ಯವಸ್ಥೆ ಕೂಡ ಇದೆ. ಮನೆಯಲ್ಲಿನ ಸಂಪತ್ತು ಕಂಡು ಅಧಿಕಾರಿಗಳು ಶಾಕ್ ಆಗಿದ್ದಾರೆ.