ಜಿಲ್ಲೆ

ಬಂಟರ ಸಂಘ ಮಧೂರು ಸಮಿತಿ ವತಿಯಿಂದ ಆಟಿದ ಕೂಟ

Avinash R

ಕಾಸರಗೋಡು: ಬಂಟರ ಸಂಘ ಮಧೂರು ಸಮಿತಿ ವತಿಯಿಂದ ಆಟಿದ ಕೂಟ ಮಧೂರಿನ ಸಮೀಪದ ಪರಕ್ಕಿಲದಲ್ಲಿರುವ ಸಂಘದ ಕಾರ್ಯಾಲಯ ಭವನದಲ್ಲಿ ನಡೆಯಿತು.

25ಕ್ಕೂ ಮಿಕ್ಕಿ ವಿವಿಧ ತಿಂಡಿ-ತಿನಿಸುಗಳನ್ನು ತಯಾರಿಸಲಾಗಿತ್ತು. ಕೂಡ್ಲು, ಮಧೂರು, ಮಾಯಿಪ್ಪಾಡಿ ಸಿರಿಬಾಗಿಲುಗಳ ಮಹಿಳೆಯರು ಆಟಿ ತಿಂಗಳ ವಿಶೇಷ ಖಾದ್ಯ ತಯಾರಿಸಿ ಪ್ರದರ್ಶಿಸಿದ್ದರು. ಲೀಲಾವತಿ ಉದ್ಘಾಟಿಸಿದರು. ಬಂಟರ ಸಂಘದ ಮಧೂರು ಸಮಿತಿ ಅಧ್ಯಕ್ಷ ರಾಮಕೃಷ್ಣ ಆಳ್ವ ಅಧ್ಯಕ್ಷತೆ ವಹಿಸಿದರು.

ವಕೀಲ ಹಾಗೂ ದ.ಕ. ಜಿಲ್ಲಾ ಹರಿಕಥಾ ಪರಿಷತ್ ಅಧ್ಯಕ್ಷ ಮಹಾಬಲ ಶೆಟ್ಟಿ, ಕಾಸರಗೋಡು ಜಿಲ್ಲಾ ಬಂಟರ ಸಂಘದ ಮಾಜಿ ಅಧ್ಯಕ್ಷ ವಕೀಲ ಸದಾನಂದ ರೈ, ಕಾಸರಗೋಡು ವಲಯ ಸಂಘದ ಅಧ್ಯಕ್ಷ ಸುಬ್ಬಣ್ಣ ಆಳ್ವ ಕುಚಿಕ್ಕಾಡು, ಬಾಬು ರೈ ಗಂಗೆ, ಅಶೋಕ್ ರೈ, ಮಹಿಳಾ ಸಮಿತಿಯ ಗೌರವ ಅಧ್ಯಕ್ಷೆ ನಾಟಿ ವೈದ್ಯೆ ಯಮುನಾ ಶೆಟ್ಟಿ ಉಪಸ್ಥಿತರಿದ್ದರು.

ಮಹಿಳಾ ಸಮಿತಿಯ ಶ್ಯಾಮಲಾ ಎಂ.ಶೆಟ್ಟಿ ಕುದ್ರೆಪ್ಪಾಡಿ ಸ್ವಾಗತಿಸಿದರು. ರೋಹಿತಾಕ್ಷಿ ಬಿ.ರೈ ಕಾರ್ಯಕ್ರಮ ನಿರೂಪಿಸಿದರು. ಜಯಲಕ್ಷ್ಮೀ ಅಡಪ ವಂದಿಸಿದರು.