ವಿಶಾಲ್ ಅವರ ಪತ್ನಿ ನೀಕ್ಷಾ  
ಜಿಲ್ಲೆ

ಬೈಕ್ ಸ್ಕಿಡ್ ಆಗಿ ಯುವತಿ ಸಾವು

ಕಾರ್ಕಳ: ಈದು ಕ್ರಾಸ್ ರಸ್ತೆಯಲ್ಲಿ ನಾಯಿ ಅಡ್ಡ ಬಂದ ಪರಿಣಾಮ ಬೈಕ್ ಸ್ಕಿಡ್ ಆಗಿ ಸಹ ಸಾವರೆ ಯುವತಿ ಮೃತಪಟ್ಟಿದ್ದಾರೆ. ಈದು ಗ್ರಾಮದ ಕರೆಂಬ್ಯಾಲುವಿನ ವಿಶಾಲ್ ಅವರ ಪತ್ನಿ ನೀಕ್ಷಾ (26) ಮೃತಪಟ್ಟವರು. ಶನಿವಾರ ಸಂಜೆ ಗಂಡನೊಂದಿಗೆ ಬೈಕ್‌ನಲ್ಲಿ ಸಾಗುತ್ತಿದ್ದಾಗ, ಈದು ಗ್ರಾಮದ ಈದು ಕ್ರಾಸ್ ಬಳಿಯ ಪಂಚಾಯಿತಿ ತಾಜ್ಯ ನಿರ್ವಹಣಾ ಘಟಕದ ಎದುರುಗಡೆ ಹಾದು ಹೋಗುವ ಬಜಗೋಳಿ- ಧರ್ಮಸ್ಥಳ ರಾಜ್ಯ ಹೆದ್ದಾರಿಯಲ್ಲಿ ನಾಯಿ ಅಡ್ಡ ಬಂದಿದ್ದು, ಬೈಕ್ ಸವಾರ ಬ್ರೇಕ್ ಹಾಕಿದ್ದರಿಂದ ಬೈಕ್ ಸ್ಕಿಡ್ ಆಗಿ, ವಿಶಾಲ್ ಅವರ ಪತ್ನಿ ನೀಕ್ಷಾ ಮತ್ತು ಭುವಿಷಾ (2) ಜತೆ ಬೈಕ್ ಸಮೇತ ರಸ್ತೆಗೆ ಬಿದ್ದ ಪರಿಣಾಮ ನೀಕ್ಷಾರ ತಲೆಗೆ ತೀವ್ರ ಗಾಯವಾಗಿದ್ದು, ಕೂಡಲೇ ಚಿಕಿತ್ಸೆಗೆ ಕಾರ್ಕಳಕ್ಕೆ ಕರೆದುಕೊಂಡು ಬರುವಾಗ ದಾರಿ ಮಧ್ಯೆ ಮೃತಪಟ್ಟಿದ್ದಾರೆ.
ದ್ವಿಚಕ್ರ ವಾಹನ ಸವಾರ ವಿಶಾಲ್ ಹಾಗೂ ಮಗು ಭುವಿಷಾಳಿಗೆ ಸಣ್ಣಪುಟ್ಟ ಗಾಯವಾಗಿದ್ದು, ಚಿಕಿತ್ಸೆ ಬಗ್ಗೆ ಕಾರ್ಕಳ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.