ಕಾರ್ಕಳ: ತಾಲೂಕಾದ್ಯಂತ ಶುಕ್ರವಾರ ಹಾಗೂ ಶನಿವಾರ ಸುರಿದ ಭಾರಿ ಗಾಳಿ ಮಳೆಗೆ ಅಪಾರ ಹಾನಿ ಸಂಭವಿಸಿದೆ.
ಎರ್ಲಪಾಡಿ ಗ್ರಾಮದ ನಿವಾಸಿ ಶಕೀಲಾ ಶೆಟ್ಟಿ ಎಂಬುವರ ತೋಟದ ತೆಂಗಿನ ಹಾಗೂ ಅಡಕೆ ಮರಗಳು ಗಾಳಿ ರಭಸಕ್ಕೆ ಧರೆಗೆ ಉರುಳಿವೆ. ಇರ್ವತ್ತೂರು ಗ್ರಾಮದ ಸಂಜೀವಿ ಎಂಬುವರ ದನದ ಕೊಟ್ಟಿಗೆ ಗಾಳಿ ಮಳೆಯಿಂದ ಹಾನಿಯಾಗಿದೆ.
ಶುಕ್ರವಾರ ರಾತ್ರಿ 12.20ರ ಸುಮಾರಿಗೆ ಸುರಿದ ಭಾರಿ ಗಾಳಿ ಮಳೆಯಿಂದ ಮುಡಾರು ಗ್ರಾಪಂ ವ್ಯಾಪ್ತಿಯಲ್ಲಿ ಅಪಾರ ಹಾನಿಯುಂಟಾಗಿದೆ. ಮುಡಾರು ನಿವಾಸಿ ವನಜಾ, ರತ್ನ ದೇವಾಡಿಗ, ಗಿರಿಜಾ, ಕಮಲ ದೇವಾಡಿಗ, ಸುಜಾತಾ, ಲಕ್ಷ್ಮೀ ಶೆಟ್ಟಿಗಾರ್ತಿ ಎಂಬುವರ ಮನೆಗೆ ಹಾನಿಯಾಗಿದೆ. ಗೌತಮ್ ಮೇಲೂರು ಎಂಬುವರ ತೋಟದಲ್ಲಿ 150ಕ್ಕೂ ಅಧಿಕ ಮರಗಳು ಧರೆಗೆ ಉರುಳಿವೆ. ಮಾಲತಿ, ವಿಜಯ, ಜೋಗಮ್ಮ ಎಂಬುವರ ಅಡಕೆ ತೋಟದಲ್ಲಿ ಮರಗಳು ಧರಾಶಾಯಿಯಾಗಿವೆ.