ಜಿಲ್ಲೆ

ಕಾಂಕ್ರೀಟ್​ ಮಿಕ್ಸರ್​ ಲಾರಿ ಚಾಲನೆ ಮಾಡುತ್ತಿದ್ದ ಯುವಕನಿಗೆ ಕರೆಂಟ್​ ಶಾಕ್​! ಸ್ಥಳದಲ್ಲೇ ಸಾವನ್ನಪ್ಪಿದ ಯುವಕ

ದಾವಣಗೆರೆ: ಕಾಂಕ್ರೀಟ್ ಮಿಕ್ಸರ್‌ ಲಾರಿಗೆ ವಿದ್ಯುತ್ ಸ್ಪರ್ಶಿಸಿದ ಹಿನ್ನೆಲೆ ಚಾಲಕ ದುರ್ಮರಣಕ್ಕೀಡಾಗಿರುವ ಘಟನೆ ದಾವಣಗರೆಯಲ್ಲಿ ನಡೆದಿದೆ. ವಿದ್ಯುತ್ ಮೇನ್ ಲೈನ್‌ಗೆ ಮಿಕ್ಸರ್​ ತಗುಲಿದ ಹಿನ್ನೆಲೆಯಲ್ಲಿ ಅವಘಡ ಸಂಬವಿಸಿರುವುದಾಗಿ ಹೇಳಲಾಗಿದೆ.

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ‌ ಸಾಸ್ವೆಹಳ್ಳಿ ಬಳಿ ಈ ಘಟನೆ ನಡೆದಿದೆ. ವಿಶ್ವನಾಥ (20) ಹೆಸರಿನ ಯುವಕ ಕಾಂಕ್ರೀಟ್ ಮಿಕ್ಸರ್ ಟಬ್‌ನ್ನು ಲಾರಿಯಲ್ಲಿ ಸಾಗಿಸುತ್ತಿದ್ದ. ಸಾಸ್ವೆಹಳ್ಳಿಯ ಕರ್ನಾಟಕ ಬ್ಯಾಂಕ್ ಸಮೀಪ ಘಟನೆ ಲಾರಿ ಚಲಿಸುವಾಗ ವಿದ್ಯುತ್​ ಮೇನ್​ ಲೇನ್​ಗೆ ಮಿಕ್ಸರ್​ ತಗುಲಿದೆ. ಅದರಿಂದ ವಿದ್ಯುತ್​ ಪ್ರವಹಿಸಿದ್ದು, ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಯುವಕ ಕೆಬಿಆರ್ ಕಂಪನಿಯ ಕಾಂಕ್ರೀಟ್ ಮಿಕ್ಸರ್ ಲಾರಿಗೆ ಚಾಲಕನಾಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.