ಬೆಂಗಳೂರು: ಕರ್ತವ್ಯ ನಿರತ ಪೊಲೀಸರ ಮೇಲೆ ನಿನ್ನೆ(ಸೋಮವಾರ) ತಡರಾತ್ರಿ ಪುಂಡರು ಮಾರಣಾಂತಿಕ ಹಲ್ಲೆ ನಡೆಸಿದ್ದು, ವಿಡಿಯೋ ವೈರಲ್ ಆಗಿದೆ.
ಯಲಹಂಕ ನ್ಯೂಟೌನ್ನ ಚಿಕ್ಕಬೆಟ್ಟಹಳ್ಳಿ ಬಳಿ ಈ ಘಟನೆ ಸಂಭವಿಸಿದೆ. ಯಲಹಂಕ ನ್ಯೂಟೌನ್ ಠಾಣೆಯ ಪಿಎಸ್ಐ ಶ್ರೀಶೈಲ ಮತ್ತು ಹಾಗೂ ಕಾನ್ಸ್ಟೇಬಲ್ ಅಸ್ಲಾಂ ಗಂಭೀರ ಗಾಯಗೊಂಡಿದ್ದಾರೆ. ಕಾರಿಗೆ ಬೈಕ್ ಟಚ್ಚಾಯ್ತು ಅನ್ನೋ ಕಾರಣಕ್ಕೆ ಆರೋಪಿ ಸುಧೀರ್ ಆ್ಯಂಡ್ ಟೀಂ ಪೊಲೀಸರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದೆ.
ರಸ್ತೆ ಕಾಮಗಾರಿ ನಡೆಯುತ್ತಿರುವ ಕಾರಣ ಚಿಕ್ಕ ರಸ್ತೆಯಲ್ಲೇ ಎರಡೆರಡು ವಾಹನ ಹೋಗ್ಬೇಕಿತ್ತು. ಈ ವೇಳೆ ಪಿಎಸ್ಐ ಶ್ರೀಶೈಲ ಹಾಗೂ ಪೇದೆ ಹೋಗ್ತಿದ್ದ ಬೈಕ್ ಸುಧೀರ್ನ ಕಾರ್ಗೆ ಟಚ್ ಆಗಿದೆ. ಆ ವೇಳೆ ಪಿಎಸ್ಐ ಕ್ಷಮೆ ಕೇಳಿದ್ರೂ ಹಿಂದೆಮುಂದೆ ನೋಡದೆ ಸುಧೀರ್ ಮತ್ತು ಆತನ ಸಹಚರರು ಹಲ್ಲೆ ಮಾಡಿ ಎಸ್ಕೇಪ್ ಹಾಗಿದ್ದಾರೆ. ಆರೋಪಿಗಳ ವಿರುದ್ಧ ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.