ಜಿಲ್ಲೆ

ಬೆಂಗ್ಳೂರಲ್ಲಿ ವಿಕ್ಟೋರಿಯಾ ಆಸ್ಪತ್ರೆ ವೈದ್ಯ ಆತ್ಮಹತ್ಯೆ: 3 ತಿಂಗಳ ಹಿಂದೆ ವೈದ್ಯೆ ಜತೆ ಮದ್ವೆ ಆಗಿದ್ದವ ಸಾವಿನ ಮನೆಯ ಕದ ತಟ್ಟಿದ್ದೇಕೆ?

ಬೆಂಗಳೂರು: ವಿಕ್ಟೋರಿಯಾ ಆಸ್ಪತ್ರೆ ವೈದ್ಯರೊಬ್ಬರು ಅಪಾರ್ಟ್​ಮೆಂಟ್​ನ ಕಟ್ಟಡದ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದಲ್ಲಿ ಬುಧವಾರ ಸಂಭವಿಸಿದೆ.

ಡಾ. ಪೃಥ್ವಿರಾಜ್ ರೆಡ್ಡಿ(31) ಆತ್ಮಹತ್ಯೆ ಮಾಡಿಕೊಂಡ ವೈದ್ಯ. ಮೂರು ತಿಂಗಳ ಹಿಂದಷ್ಟೇ ಇವರು ವೈದ್ಯೆಯೊಬ್ಬರ ಜೊತೆ ಮದುವೆ ಆಗಿದ್ದರು. ಅಮೃತಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಗೋದ್ರೇಜ್ ಅಪಾರ್ಟ್‌ಮೆಂಟ್​ನಲ್ಲಿ ವಾಸವಿದ್ದರು.

ಬುಧವಾರ ಬೆಳಗಿನ ಜಾವ ಅಪಾರ್ಟ್‌ಮೆಂಟ್​ನ 11ನೇ ಮಹಡಿ ಮೇಲಿನಿಂದ ಕೆಳಕ್ಕೆ ಜಿಗಿದು ಡಾ. ಪೃಥ್ವಿರಾಜ್ ರೆಡ್ಡಿ ಮೃತಪಟ್ಟಿದ್ದಾರೆ. ಆತ್ಮಹತ್ಯೆಗೆ ಕಾರಣ ಏನೆಂದು ಗೊತ್ತಾಗಿಲ್ಲ. ವೈದ್ಯನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬಸ್ಥರು ಆಂಧ್ರದಿಂದ ಬೆಂಗಳೂರಿಗೆ ಆಗಮಿಸಿದ್ದಾರೆ. ಪೊಲೀಸರು ತನಿಖೆ ಮುಂದುರಿಸಿದ್ದಾರೆ.

ಡಾ. ಪೃಥ್ವಿರಾಜ್​ ಕೂಡ ವೈದ್ಯರು. ಪತ್ನಿಯೂ ವೈದ್ಯೆ. ಸುಖವಾಗಿ ಸಂಸಾರ ಮಾಡಬೇಕಿದ್ದವ ಸಾವಿನ ಮನೆಯ ಕದ ತಟ್ಟಿದ್ದೇಕೆ? ಎಂಬುದು ಪೊಲೀಸರ ತನಿಖೆ ಬಳಿಕವಷ್ಟೇ ಗೊತ್ತಾಗಲಿದೆ.