ಜಿಲ್ಲೆ

ಗಣೇಶೋತ್ಸವ ಮೆರವಣಿಗೆಯಲ್ಲಿ ಕುಣಿದು ಕುಪ್ಪಳಿಸುತ್ತಲೇ ಪ್ರಾಣ ಬಿಟ್ಟ! ಡಿಜೆ ಸೌಂಡ್ಸ್​ ಎಫೆಕ್ಟ್​ಗೆ ಹೃದಯಾಘಾತ?

ತುಮಕೂರು: ಗಣೇಶೋತ್ಸವ ಮೆರವಣಿಗೆಯಲ್ಲಿ ಕುಣಿದು ಕುಪ್ಪಳಿಸುವಾಗ ವ್ಯಕ್ತಿಯೊಬ್ಬರಿಗೆ ಹೃದಯಾಘಾತವಾಗಿ ಮೃತಪಟ್ಟ ಘಟನೆ ತುಮಕೂರು ತಾಲೂಕಿನ ಹೆಬ್ಬಾಕ ಗ್ರಾಮದಲ್ಲಿ ನಡೆದಿದೆ.

ವಿರೂಪಾಕ್ಷ (48) ಮೃತ ದುರ್ದೈವಿ. ಹೆಬ್ಬಾಕ ಗ್ರಾಮದಲ್ಲಿ ಪ್ರತಿಷ್ಠಾಪಿಸಿದ್ದ ಗಣಪತಿ ನಿಮಜ್ಜನದ ಮೆರವಣಿಗೆ ವೇಳೆ ಶನಿವಾರ ಡಿಜೆ ಸೌಂಡ್ಸ್ ಹಾಕಲಾಗಿತ್ತು. ಸೌಂಡ್​ಗೆ ತಕ್ಕಂತೆ ಮೆರವಣಿಗೆಯಲ್ಲಿ ಜನ ಸಂಭ್ರಮ-ಸಡಗರದೊಂದಿಗೆ ಕುಣಿದು ಕುಪ್ಪಳಿಸುತ್ತಿದ್ದರು. ವಿರೂಪಾಕ್ಷ ಕೂಡ ಕುಣಿಯುತ್ತಿದ್ದರು. ಈ ವೇಳೆ ಕುಸಿದು ಬಿದ್ದ ವಿರೂಪಾಕ್ಷರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತ್ತಾದರೂ ಬದುಕಲಿಲ್ಲ.

ಡಿಜೆ ಸೌಂಡ್ಸ್ ಹೆಚ್ಚಿತ್ತು. ಪರಿಣಾಮ ಹೃದಯಾಘಾತವಾಗಿ ವಿರೂಪಾಕ್ಷ ಮೃತಪಟ್ಟಿರುವ ಶಂಕೆ‌ ವ್ಯಕ್ತವಾಗಿದೆ. ಈ ಸಂಬಂಧ ಬೆಳ್ಳಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.