ಜಿಲ್ಲೆ

ಟೂತ್​ ಪೇಸ್ಟ್ ಎಂದು ಇಲಿ ಪಾಷಾಣದಲ್ಲಿ ಹಲ್ಲುಜ್ಜಿದ ಯುವತಿ ಸಾವು! ದಕ್ಷಿಣ ಕನ್ನಡ ಜಿಲ್ಲೇಲಿ ದುರಂತ

arunakunigal

ಮಂಗಳೂರು: ಟೂತ್​ ಪೇಸ್ಟ್ ಎಂದು ಇಲಿ ಪಾಷಾಣದಲ್ಲಿ ಹಲ್ಲುಜ್ಜಿದ ಯುವತಿಯೊಬ್ಬಳು ತೀವ್ರ ಅಸ್ವಸ್ಥಗೊಂಡು ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ದಕ್ಷಿಣ ಕನ್ನಡ ಜಿಲ್ಲೆ ಸುಳ್ಯದಲ್ಲಿ ಈ ದುರಂತ ಸಂಭವಿಸಿದೆ. ಶ್ರಾವ್ಯ(22) ಮೃತ ದುರ್ದೈವಿ. ಮನೆಯ ಬಾತ್ ರೂಮಿನ ಕಿಟಕಿ ಬಳಿ ಟೂತ್ ಪೇಸ್ಟ್ ಇಡಲಾಗಿತ್ತು. ಟೂತ್ ಪೇಸ್ಟ್ ಪಕ್ಕದಲ್ಲೇ ಇಲಿ ಪಾಷಾಣದ ಔಷಧಿಯೂ ಇತ್ತು. ಕತ್ತಲಲ್ಲಿ ಇಲಿ ಪಾಷಾಣವನ್ನೇ ಟೂತ್​ಪೇಸ್ಟ್​ ಎಂದು ಕೊಂಡು ಅದರಲ್ಲಿ ಹಲ್ಲುಜ್ಜಿದ್ದಾಳೆ. ಇದರಿಂದ ಅಸ್ವಸ್ಥಗೊಂಡ ಯುವತಿಯನ್ನು ಕುಟುಂಬಸ್ಥರು ಕೂಡಲೇ ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಗೆ ದಾಖಲಿಸಿದ್ದರಾದರೂ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ.