ಜಿಲ್ಲೆ

ಪ್ರವಾಸಿಗರನ್ನ ಕರೆ ತಂದಿದ್ದ ಟೆಂಪೋ ಟ್ರಾವೆಲ್​ ಹಳ್ಳಕ್ಕೆ ನುಗ್ಗಿ ಕೆಲಕಾಲ ಆತಂಕ: ತಪ್ಪಿದ ಅನಾಹುತ

ಮಂಡ್ಯ: ಪ್ರವಾಸಿಗರನ್ನು ಕರೆತಂದಿದ್ದ ಟೆಂಪೋ ಟ್ರಾವೆಲ್​ ವಾಹನ ಇಳಿಜಾರಿನಲ್ಲಿನ ಹಳ್ಳಕ್ಕೆ ನುಗ್ಗಿ ಕೆಲಕಾಲ ಆತಂಕ ಸೃಷ್ಟಿಯಾದ ಘಟನೆ ಪಾಂಡವಪುರ ತಾಲೂಕಿನ ಕೆರೆತೊಣ್ಣೂರು ಬಳಿ ಸೋಮವಾರ ಬೆಳಗ್ಗೆ ಸಂಭವಿಸಿತ್ತು.

ಕೆರೆತೊಣ್ಣುರು ಪ್ರವಾಸಿ ಸ್ಥಳಕ್ಕೆ ಪ್ರವಾಸಿಗರನ್ನ ಟೆಂಟೋ ಟ್ರಾವೆಲ್ ವಾಹನದಲ್ಲಿ ಕರೆ ತರಲಾಗಿತ್ತು. ಪ್ರವಾಸಿಗರನ್ನ ಇಳಿಸಿ, ವಾಹನವನ್ನ ಒಂದು ಕಡೆ ನಿಲ್ಲಿಸಲಾಗಿತ್ತು. ಆ ಪ್ರದೇಶ ಇಳಿಜಾರು ಆಗಿದ್ದರಿಂದ ವಾಹನವು ನಿಯಂತ್ರಣ ತಪ್ಪಿ ಹಳ್ಳಕ್ಕೆ ನುಗ್ಗಿತ್ತು.

ಟಿಟಿ ವಾಹನದಲ್ಲಿ ಯಾರು ಇಲ್ಲದ ಕಾರಣ ಸಾವು-ನೋವು ಸಂಭವಿಸಿಲ್ಲ. ಭಾರಿ ಅನಾಹುತದಿಂದ ಪಾರಾಗಿ ಪ್ರಯಾಣಿಕರು ನಿಟ್ಟುಸಿರು ಬಿಟ್ಟರು. ಕ್ರೇನ್ ಮೂಲಕ ಟಿಟಿ ವಾಹನವನ್ನ ಮೇಲೆಕ್ಕೆ ಎಳೆದು ತರಲಾಯಿತು. ಪಾಂಡವಪುರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

,