ಬಳ್ಳಾರಿ( ಸಿರಗುಪ್ಪ): ಮಕ್ಕಳಿಗೆ ಅಕ್ಕಿ, ಗೋಧಿ ನೀಡದೆ ಮನೆಗೆ ಹೊಯ್ಯಲು ತೆಗೆದುಕೊಂಡಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು, ಬಚ್ಚಿಟ್ಟ ಅಕ್ಕಿಯನ್ನು ನೆಲಕ್ಕೆ ಸುರಿದು ಶಿಕ್ಷಕರ ವಿರುದ್ಧ ಆಕ್ರೋಶ ಹೊರ ಹಾಕಿದ ಘಟನೆ ಸಿರುಗುಪ್ಪ ತಾಲೂಕಿನ ಇಟಗಿಹಾಳ್ ಗ್ರಾಮದಲ್ಲಿ ಗುರುವಾರ ನಡೆದಿದೆ.
ಬಿಸಿಯೂಟ ಯೋಜನೆಯಡಿ ಸರ್ಕಾರ ನೀಡಿದ ದವಸ-ಧಾನ್ಯವನ್ನು ಬೆರಳೆಣಿಕೆ ಮಕ್ಕಳಿಗೆ ನೀಡಿ ಉಳಿದ ಅಕ್ಕಿ- ಗೋಧಿಯನ್ನು ಶಿಕ್ಷಕರೇ ಮನೆಗೆ ತೆಗೆದುಕೊಂಡು ಹೋಗುತ್ತಿದ್ದಾರೆ ಎಂದು ಗ್ರಾಮಸ್ಥರು ಗಂಭೀರ ಆರೋಪ ಮಾಡಿದರು, ಕಳೆದ ಮೂರು ತಿಂಗಳಿಂದ ಮಕ್ಕಳಿಗೆ ಆಹಾರ ಧಾನ್ಯ ನೀಡದೆ ಅಕ್ರಮ ಎಸಗುತ್ತಿದ್ದಾರೆ ಎಂದು ಕೂಗಾಗಡುತ್ತಲೇ ಶಾಲೆಯಲ್ಲಿದ್ದ ಅಕ್ಕಿಯನ್ನು ನೆಲಕ್ಕೆ ಸುರಿದು ತರಾಟೆಗೆ ತೆಗೆದುಕೊಂಡರು.