ಜಿಲ್ಲೆ

ಲಕ್ಷ್ಮೀ ಹೆಬ್ಬಾಳ್ಕರ್​ ಹೆಸರಲ್ಲಿ ಬೇನಾಮಿ ಆಸ್ತಿ ಖರೀದಿಸಿದ ಡಿಕೆಶಿ! ಎಲ್ಲಿ ಗೊತ್ತಾ? ಇದು ಸೊಗಡು ಶಿವಣ್ಣ ಬಾಯ್ಬಿಟ್ಟ ರಹಸ್ಯ

ತುಮಕೂರು: ಕಾಂಗ್ರೆಸ್​ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್​ ಹೆಸರಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಬೇನಾಮಿ ಆಸ್ತಿ ಮಾಡಿದ್ದಾರೆ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಹೊಸ ಬಾಂಬ್ ಸಿಡಿಸಿದ್ದಾರೆ. ಅತ್ತ ಸೊಗಡು ಶಿವಣ್ಣರ ಆರೋಪಕ್ಕೆ ಧ್ವನಿಗೂಡಿಸಿರುವ ಕೇಂದ್ರ ಸಚಿವ ನಾರಾಯಣಸ್ವಾಮಿ, ದಾಖಲೆ ಇಲ್ಲದೆ ಸೊಗಡು ಶಿವಣ್ಣ ಮಾತನಾಡಲ್ಲ. ಅವರ ಬಳಿ ದಾಖಲೆ ಇದೆ ಎಂದಿದ್ದಾರೆ.

ಡಿಕೆಶಿ ಕಲೆಕ್ಷನ್​ ಗಿರಾಕಿ ಎಂದಿದ್ದ ಸಲೀಂ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಕೋಲಾಹಲವನ್ನೇ ಸೃಷ್ಟಿಸಿತ್ತು. ಈ ಕುರಿತು ತುಮಕೂರಲ್ಲಿ ಪ್ರತಿಕ್ರಿಯಿಸಿದ ಸೊಗಡು ಶಿವಣ್ಣ, ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಲಕ್ಷ್ಮೀ ಹೆಬ್ಬಾಳಕರ್ ಹೆಸರಲ್ಲಿ ಡಿಕೆಶಿ ಅವರು ಬೇನಾಮಿ ಜಮೀನು ಖರೀದಿ ಮಾಡಿದ್ದಾರೆ ಎಂದು ಸ್ಫೋಟಕ ಹೇಳಿಕೆ ಕೊಟ್ಟಿದ್ದಾರೆ.

ಡಿ.ಕೆ. ಶಿವಕುಮಾರ್ ವಿರುದ್ಧ ಸಿಬಿಐ ತನಿಖೆ ಆಗಬೇಕು. ಪಾವಗಡ ಸೋಲಾರ್ ಪಾರ್ಕ್​ನಲ್ಲಿ ಸಾವಿರಾರು ಕೋಟಿ ರೂ. ಅವ್ಯವಹಾರ ನಡೆದಿದೆ. ಡಿಕೆಶಿ ಅಲಿಬಾಬಾ ಗ್ಯಾಂಗಿನ ಡಕಾಯತಿ. ಈ ಡಾಕಾಯತನಿಗೆ ಇತರ 4೦ ಜನ ಕಳ್ಳರು ಸಪೋರ್ಟ್ ಮಾಡ್ತಿದ್ದಾರೆ ಎಂದು ಸೊಗಡು ಶಿವಣ್ಣ ಲೇವಡಿ ಮಾಡಿದರು.

ಸೊಗಡು ಶಿವಣ್ಣರ ಹೇಳಿಕೆ ಕುರಿತು ಆನೇಕಲ್​ನಲ್ಲಿ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ನಾರಾಯಣಸ್ವಾಮಿ, ಸೊಗಡು ಶಿವಣ್ಣ ದಾಖಲೆ ಇಲ್ಲದೆ ಮಾತನಾಡುವವರಲ್ಲ. ಅವರ ಬಳಿ ದಾಖಲೆ ಇರೋದಕ್ಕೆ ಮಾತನಾಡಿದ್ದಾರೆ. ತನಿಖೆ ಆಗಬೇಕು ಎಂದರು.

<iframe src="https://embed.kooapp.com/embedKoo?kooId=738942c9-7ce9-4ef8-84c2-0b7b9a322944" class="kooFrame"></iframe><script src="https://embed.kooapp.com/iframe2.js"></script>