ಜಿಲ್ಲೆ

ಕುಮಾರಸ್ವಾಮಿ ಅವ್ರೇ ಬಿಜೆಪಿಯನ್ನು ಸೋಲಿಸಬೇಕಾ? ಹಾಗದ್ರೆ ನಮ್ಮನ್ನು ಬೆಂಬಲಿಸಿ... ಜೆಡಿಎಸ್​ಗೆ ಆಫರ್​ ಇಟ್ಟ ಸಿದ್ದು

arunakunigal

ಬೆಂಗಳೂರು: ಎಚ್​.ಡಿ.ಕುಮಾರಸ್ವಾಮಿ ಅವರೇ ಬಿಜೆಪಿಯನ್ನು ಸೋಲಿಸಬೇಕಾ? ಹಾಗದ್ರೆ ನಮಗೆ ಬೆಂಬಲ ನೀಡಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಬಹಿರಂಗವಾಗಿಯೇ ಜೆಡಿಎಸ್​ಗೆ ಆಫರ್​ ಇಟ್ಟಿದ್ದಾರೆ.

ರಾಜ್ಯಸಭೆ ಚುನಾವಣೆಗೆ ನಾಳೆ ಮತನಾದ ನಡೆಯಲಿದ್ದು, 4 ನೇ ಅಭ್ಯರ್ಥಿ ಆಯ್ಕೆಗೆ ಮೂರು ಪಕ್ಷದವರ ಬಳಿಯೂ ಬಹುಮತ ಇಲ್ಲ. ಕೊನೇ ಹಂತದ ಕಸರತ್ತು ನಡೆಯುತ್ತಿದ್ದು, ಜೆಡಿಎಸ್​ ಶಾಸಕರಿಗೆ ಕಾಂಗ್ರೆಸ್​ ಗಾಳ ಹಾಕಿದೆ. ಈ ಬಗ್ಗೆ ಗುರುವಾರ ಮಾತನಾಡಿದ ಸಿದ್ದರಾಮಯ್ಯ, ಕಾಂಗ್ರೆಸ್​ನಲ್ಲಿ 80 ಶಾಸಕರು ಇದ್ದಾಗಲೇ ಎಚ್​ಡಿಕೆ ಅವರನ್ನು ನಾವು ಸಿಎಂ ಮಾಡಿದ್ದೇವೆ. ಈ ಬಾರಿ ರಾಜ್ಯಸಭೆ ಚುನಾವಣೆಯ 4ನೇ ಅಭ್ಯರ್ಥಿಯನ್ನಾಗಿ ಅಲ್ಪಸಂಖ್ಯಾತ ಅಭ್ಯರ್ಥಿ ಹಾಕಿದ್ದೇವೆ. ಕುಮಾರಸ್ವಾಮಿ ಅವರೇ ನಮಗೆ ಬೆಂಬಲ ನೀಡಿ. ಆ ಮೂಲಕ ಬಿಜೆಪಿ ಸೋಲಿಸಿ ಎಂದು ಕರೆ ನೀಡಿದ್ದಾರೆ.

ದೇವೇಗೌಡರನ್ನು ನಾವು ಪ್ರಧಾನಿ‌ ಮಾಡಲಿಲ್ಲವೇ? ಅವರನ್ನು ರಾಜ್ಯಸಭೆಗೆ ಕಳಿಸಲಿಲ್ಲವೇ? ನಮ್ಮ ಅಭ್ಯರ್ಥಿ ಮೈನಾರಿಟಿಗೆ ಸೇರಿದವರು. ಜಾತ್ಯತೀತ ನಂಬಿಕೆಯಲ್ಲಿ ಅಭ್ಯರ್ಥಿ ಹಾಕಿದ್ದೇವೆ. ಜೆಡಿಎಸ್​ನವರು ಬೆಂಬಲಿಸಲಿ. ನಾವು ಮೊದಲು ಅಭ್ಯರ್ಥಿ ಹಾಕಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಮೂಲಗಳ ಪ್ರಕಾರ ಸಿದ್ದರಾಮಯ್ಯ ಅವರು ಒಟ್ಟು 9 ಜೆಡಿಎಸ್​ ಶಾಸಕರನ್ನು ಸಂಪರ್ಕಿಸಿ ತಮ್ಮ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಮನವಿ ಮಾಡಿದ್ದಾರೆ.