ಜಿಲ್ಲೆ

14 ಮೀನುಗಾರರಿದ್ದ ಹಡಗು ಮುಳುಗಡೆ: ಇಬ್ಬರ ರಕ್ಷಣೆ, ಮೂವರ ಶವ ಪತ್ತೆ, 9 ಜನ ನಾಪತ್ತೆ

arunakunigal

ಮಂಗಳೂರು: ಮಂಗಳೂರಿನಿಂದ 43 ನಾಟಿಕಲ್‌ ಮೈಲಿ ದೂರದಲ್ಲಿ ಮಂಗಳವಾರ ಉಂಟಾದ ಅವಘಡದಲ್ಲಿ ನೀರುಪಾಲಾದ 14 ಮೀನುಗಾರರ ಶೋಧ ಕಾರ್ಯ ಮುಂದುವರಿದಿದ್ದು, ಭಾರತೀಯ ನೌಕಾಪಡೆಯೂ ಕಾರ್ಯಾಚರಣೆ ನಡೆಸುತ್ತಿದೆ.

ಭಾರತೀಯ ಕೋಸ್ಟ್‌ ಗಾರ್ಡ್‌ ಕೂಡ ಆಳ ಸಮುದ್ರದಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದು, ಡೈವರ್‌ಗಳನ್ನೂ ಬಳಸಿಕೊಳ್ಳಲಾಗುತ್ತಿದೆ. ಮಂಗಳವಾರ ಆಳಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಕೇರಳದ ಬೇಪೂರ್‌ನ ಜಾಫರ್​ಗೆ ಸೇರಿದ್ದ ರಭಾ ಎನ್ನುವ ಮೀನುಗಾರಿಕಾ ದೋಣಿಯು ಸಿಂಗಪುರ ಮೂಲದ 'ಎಂವಿ ಎಪಿಎಲ್‌ ಲೆ ಹಾವ್ರೆʼಎನ್ನುವ ಬೃಹತ್‌ ಕಂಟೈನರ್‌ ಸಾಗಾಟ ನೌಕೆಗೆ ಡಿಕ್ಕಿಯಾಗಿತ್ತು. ಇದರಿಂದ ಹಾನಿಗೊಂಡ ಬೋಟ್‌ ಮುಳುಗತೊಡಗಿದ್ದು, ತಕ್ಷಣವೇ ಕಂಟೈನರ್‌ ಹಡಗಿನ ಕ್ಯಾಪ್ಟನ್‌ ಕೋಸ್ಟ್‌ಗಾರ್ಡ್‌ಗೆ ಮಾಹಿತಿ ನೀಡಿದ್ದರು. ದೋಣಿಯಲ್ಲಿ ಒಟ್ಟು 14 ಮೀನುಗಾರರಿದ್ದರು. ಇದನ್ನೂ ಓದಿರಿ ಶಾಸಕ ಯು.ಟಿ.ಖಾದರ್ ಕಾರು ದಾವಣಗೆರೆಯಲ್ಲಿ ಅಪಘಾತ

ಕೋಸ್ಟ್‌ಗಾರ್ಡ್‌ ಮಂಗಳೂರು ಹೆಡ್‌ ಕ್ವಾರ್ಟರ್ಸ್‌ನಿಂದ ರಕ್ಷಣಾ ಕಾರ್ಯ ಹಮ್ಮಿಕೊಳ್ಳಲಾಯಿತು. ಪ.ಬಂಗಾಳದ ಸುನಿಲ್‌ ದಾಸ್(‌34) ಹಾಗೂ ತಮಿಳುನಾಡಿನ ವೇಲುಮುರುಗನ್(37) ಎಂಬವರನ್ನು ರಕ್ಷಿಸಲಾಯಿತು. 12 ಜನರ ಪೈಕಿ ಮೂವರ ಮೃತದೇಹಗಳು ಪತ್ತೆಯಾಗಿವೆ. 9 ಮೀನುಗಾರರು ಪತ್ತೆಯಾಗಿಲ್ಲ.