ಚಿಕ್ಕಬಳ್ಳಾಪುರ: ಪ್ರಸಿದ್ಧ ಪ್ರವಾಸಿ ತಾಣ ನಂದಿಬೆಟ್ಟದ ತಪ್ಪಲಲ್ಲಿ ಪ್ರವಾಸಿಗರು ಹುಕ್ಕಾ ಸೇದಿ ಮೋಜುಮಸ್ತಿ ಮಾಡಿರುವ ವಿಡಿಯೋ ವೈರಲ್ ಆಗಿದೆ. ಸಾರ್ವಜನಿಕ ಸ್ಥಳದಲ್ಲೇ ರಾಜಾರೋಷವಾಗಿ ಯುವಕರು ಹುಕ್ಕಾ ಸೇದಿ ದುಂಡಾವರ್ತನೆ ಮೆರೆದಿದ್ದಾರೆ.
ಕರೊನಾ ಹಿನ್ನೆಲೆ ವಾರಂತ್ಯದಲ್ಲಿ ನಂದಿಬೆಟ್ಟಕ್ಕೆ ಪ್ರವೇಶ ನಿಷಿದ್ಧವಿದ್ದರೂ ಇಂದು ಬೆಳ್ಳಂಬೆಳಗ್ಗೆ ಬಂದ ಸಾವಿರಾರು ಮಂದಿಯನ್ನ ಚೆಕ್ಪೋಸ್ಟ್ನಲ್ಲೇ ಪೊಲೀಸರು ವಾಪಸ್ ಕಳುಹಿಸಿದ್ದಾರೆ. ಆದರೂ ಬೆಟ್ಟದ ತಪ್ಪಲ್ಲಲ್ಲೇ ವಾಹನಗಳನ್ನ ನಿಲ್ಲಿಸಿದ ಪ್ರವಾಸಿಗರು ಪೊಲೀಸರ ಕಣ್ತಪ್ಪಿಸಿ ಪಕ್ಕದ ಬ್ರಹ್ಮಗಿರಿ ಬೆಟ್ಟದಲ್ಲಿ ಹುಚ್ಚಾಟ ಮೆರೆದಿದ್ದಾರೆ. ಮಾಸ್ಕ್ ಧರಿಸಿದೆ ಸಾಮಾಜಿಕ ಅಂತರವನ್ನೂ ಪಾಲಿಸದೆ ಸುತ್ತಾಡುತ್ತಿದ್ದರು. ಬೆಟ್ಟ ಏರಿದ ನೂರಾರು ಮಂದಿ ಪ್ರವಾಸಿಗರನ್ನ ಕೆಳಗಿಳಿಸಲು ಪೊಲೀಸರು ಹರಸಾಹಸಪಟ್ಟರು.