ಜಿಲ್ಲೆ

ರೋಹಿಣಿ ಸಿಂಧೂರಿ ವಿರುದ್ಧ ಸಾವಿನ ಮನೆಯ ಅಸ್ತ್ರ ಬಿಟ್ಟ ಪ್ರತಾಪ್​ ಸಿಂಹ!

arunakunigal

ಚಾಮರಾಜನಗರ: ಮೈಸೂರಿನಲ್ಲಿ ಐಎಎಸ್​ ಅಧಿಕಾರಿಗಳಿಬ್ಬರ ಜಟಾಪಟಿ‌ ವಿಚಾರಕ್ಕೆ ಚಾಮರಾಜನಗರ ಆಕ್ಸಿಜನ್ ದುರಂತ ಪ್ರಕರಣವನ್ನು ಸಂಸದ ಪ್ರತಾಪ್​ ಸಿಂಹ ಎಳೆದು ತಂದಿದ್ದಾರೆ.

ಆಕ್ಸಿಜನ್​ ದುರಂತ ನಡೆದಾಗ ಮೈಸೂರನ್ನು ಕಟಕಟೆಯಲ್ಲಿ ನಿಲ್ಲಿಸಬಾರದು ಅಂತಾ ಡಿಪೆಂಡ್ ಮಾಡಿಕೊಂಡೆ. ಚಾಮರಾಜನಗರ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಆರೋಪ ಮಾಡಿದ್ದರು. ಅದಕ್ಕೆ ನಾನು ಮೈಸೂರು, ಮಂಡ್ಯ, ಚಾಮರಾಜನಗರ ಜನರು ಕಚ್ಚಾಡಬಾರದೆಂದು ಮಾತನಾಡಿದ್ದೆ. ಪದಕಿ‌ ಗ್ಯಾಸ್ ಏಜೆನ್ಸಿ ಅವರನ್ನು ವಿಚಾರಿಸಿದ್ರೆ ನಿಜ ಗೊತ್ತಾಗುತ್ತೆ ಎಂದು ಪ್ರತಾಪ್​ ಸಿಂಹ ಹೇಳಿದ್ದಾರೆ.

ಹಾಗಾದ್ರೆ ಚಾಮರಾಜನಗರದ 24 ಜನರ ಸಾವಿಗಿಂತಾ ಮೈಸೂರು ಪ್ರತಿಷ್ಠೆಯೇ ಹೆಚ್ಚಾಗಿತ್ತಾ? 24 ಜನರ ಸಾವಿಗೆ ಬೆಲೆಯೇ ಇಲ್ವಾ? ಇಷ್ಟು ದಿನ ಸುಮ್ಮನಿದ್ದ ಪ್ರತಾಪ್​ ಸಿಂಹ ಡಿಸಿ ರೋಹಿಣಿ ಸಿಂಧೂರಿ ವರ್ಗಾವಣೆಗಾಗಿ ಆಕ್ಸಿಜನ್ ದುರಂತ ಪ್ರಕರಣವನ್ನೇ ಅಸ್ತ್ರ ಮಾಡಲು ಯತ್ನಿಸಿದ್ದಾರಾ? ಎಂಬ ಪ್ರಶ್ನೆಗಳು ಮೂಡಿವೆ.