ಜಿಲ್ಲೆ

ದೇವರೇ ನೀನೆಷ್ಟು ಕ್ರೂರಿ? ನನ್ನಂಥ ವಯಸ್ಸಾದವರನ್ನ ಬಿಟ್ಟು 'ಅಪ್ಪು' ಪ್ರಾಣವನ್ನೇಕೆ ಪಡೆದೆ...

arunakunigal

ಬಾಗಲಕೋಟೆ: ಏ... ದೇವರೇ... ಇದು ಧರ್ಮನಾ? ಕರ್ಮಾನಾ? ನಮ್ಮಂತಹವರನ್ನು ಬೇಕಿದ್ರೆ ತಗೊಂಡು ಹೋಗು... ಇನ್ನು ಎಳೆಯ ವಯಸ್ಸಿನ ಮಕ್ಕಳನ್ನೇಕೆ ಬಾರದ ಲೋಕಕ್ಕೆ ದೂಡಿಬಿಟ್ಟೆ... ವಯಸ್ಸು ಆಗದೇ ಇರುವ ಮಕ್ಕಳನ್ನ ತಗೊಂಡು ಏನು ಮಾಡ್ತೀ... ಎನ್ನುತ್ತಲೇ ಹಿರಿಯ ನಟಿ ಉಮಾಶ್ರೀ ಕಣ್ಣೀರಿಟ್ಟರು.

ಪುನೀತ್​ ರಾಜ್​ಕುಮಾರ್​ ಅವರ ಸಾವಿನ ಸುದ್ದಿಕೇಳಿ ಕಣ್ಣೀರಿಟ್ಟ ಉಮಾಶ್ರೀ ಅವರು, ದೇವರನ್ನ ಶಪಿಸುತ್ತಲೇ ಅಪ್ಪು ಸಾವಿಗೆ ಕಂಬನಿ ಮಿಡಿದರು. ಏ ದೇವರೇ, ನೀನೆಷ್ಟು ಕ್ರೂರಿ? ನಮ್ಮಂಥ ವಯಸ್ಸಾದವರನ್ನ ಬಿಟ್ಟು ಚಿಕ್ಕ ವಯಸ್ಸಿನ 'ಅಪ್ಪು' ಪ್ರಾಣವನ್ನೇಕೆ ಪಡೆದೆ? ಎಂದು ಗೋಳಾಡಿದರು.

ಅಪ್ಪು ಆತ್ಮಕ್ಕೆ ಶಾಂತಿ ಸಿಗಲಿ. ಪಾಪ ಪುನೀತ್ ಮಕ್ಕಳು, ಪತ್ನಿ ಅಶ್ವಿನಿಗೆ ದುಃಖ ಭರಿಸುವ ಶಕ್ತಿ ದೊರೆಯಲಿ. ಅಪ್ಪು ಮತ್ತೆ ಕನ್ನಡ ನಾಡಲ್ಲಿ ಹುಟ್ಟಿ ಬರಲಿ, ಹೆಚ್ಚು ಆಯುಷ್ಯ ಇಟ್ಟುಕೊಂಡು ಬರಲಿ. ಇನ್ನು ಹೆಚ್ಚಿನ ಸಾಧನೆ ಮಾಡಲಿ ಎನ್ನುತ್ತಲೇ ಉಮಾಶ್ರೀ ಗದ್ಗದಿತರಾದರು.