ಜಿಲ್ಲೆ

ಮನುಷ್ಯನ ಸಂಸ್ಕಾರ, ಸಂಸ್ಕೃತಿಯನ್ನು ಒರೆಗೆ ಹಚ್ಚುವ ಅಮೂಲ್ಯ ಕಾಣಿಕೆ

ಕುಂದಾಪುರ: ಯೋಗವು ಮನುಷ್ಯನ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಒರೆಗೆ ಹಚ್ಚುವ ಅಮೂಲ್ಯ ಕಾಣಿಕೆ. ಪ್ರಪಂಚಕ್ಕೆ ಭಾರತವು ಯೋಗವನ್ನು ಕಾಣಿಕೆಯಾಗಿ ನೀಡಿ ವಿಶ್ವ ವಾನ್ಯತೆ ಗಳಿಸಿದೆ. ಜನಸಾವಾನ್ಯರೂ ತಮ್ಮ ದೈನಂದಿನ ಜೀವನದಲ್ಲಿ ಯೋಗ ಅಳವಡಿಸಿ ಕೊಳ್ಳಬೇಕಾದ ಅಗತ್ಯತೆ ಇದೆ ಎಂದು ಕುಂದಾಪುರ ಆಯುಷ್ ಇಲಾಖೆ ವೈದ್ಯೆ ಡಾ.ಶಿಲ್ಪಾ ಹೇಳಿದರು.

ಕೋಟೇಶ್ವರದ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಪ್ರೌಢಶಾಲಾ ವಿಭಾಗದಲ್ಲಿ ಎನ್‌ಎಸ್‌ಎಸ್ ಟಕದ ಆಶ್ರಯದಲ್ಲಿ ಶನಿವಾರ ನಡೆದ 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ವಿದ್ಯಾರ್ಥಿಗಳಿಗೆ ಯೋಗ ತರಬೇತಿ ನೀಡಿ ಮಾತನಾಡಿದರು.

ಉಪಪ್ರಾಂಶುಪಾಲ ಚಂದ್ರಶೇಖರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ದೈಹಿಕ ಶಿಕ್ಷಣ ಶಿಕ್ಷಕ ಉದಯ ಮಡಿವಾಳ ಎಂ. ಸ್ವಾಗತಿಸಿದರು. ಮಹಾಲಕ್ಷ್ಮೀ ನಿರೂಪಿಸಿದರು. ರವಾನಂದ ನಾಯಕ್ ವಂದಿಸಿದರು. ಮಂಜುನಾಥ್ ಹೊಳ್ಳ ಸಹಕರಿಸಿದರು.