ಜಿಲ್ಲೆ

ಪ್ರಧಾನಿ ಮೋದಿಗೆ ಮೈಸೂರಿನಿಂದ ಬಟ್ಟೆ ಉಡುಗೊರೆ..!

arunakunigal

ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮೈಸೂರಿನಿಂದ ಬಟ್ಟೆ ಉಡುಗೊರೆ ಕೊಡಲಾಗುವುದು ಎಂದು ಶಾಸಕ ಎಸ್​.ಎ.ರಾಮದಾಸ್​ ತಿಳಿಸಿದ್ದಾರೆ.

ಇತ್ತೀಚೆಗೆ ಮೈಸೂರಿಗೆ ಭೇಟಿ ನೀಡಿದ್ದ ಸಂದರ್ಭ ಹೆಣ್ಣು ಮಗಳೊಬ್ಬಳ ಬಳಿ "ನನಗೆ ಬಟ್ಟೆ ಹೊಲಿದು ಕೊಡುತ್ತೀರಾ?'' ಎಂದು ಪ್ರಧಾನಿ ಅವರು ಪ್ರಶ್ನಿಸಿದ್ದರು. ಸದ್ಯದಲ್ಲಿಯೇ ಆ ಹೆಣ್ಣು ಮಗಳಿಂದ ಮೋದಿ ಅವರಿಗೆ ಬಟ್ಟೆಯನ್ನು ಹೊಲಿಸಿ ಅವರ ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿ ನೀಡಲಾಗುವುದು ಎಂದು ರಾಮದಾಸ್​ ವಿವರಿಸಿದ್ದಾರೆ.

ಮೋದಿ ಯುಗ ಉತ್ಸವದಲ್ಲಿ ವಿವಿಧ ಇಲಾಖೆ ಯೋಜನೆಗಳನ್ನು ಜನರಿಗೆ ತಲುಪಿಸುವ ಮೂಲಕ ಸರ್ಕಾರವನ್ನು ಮನೆ ಬಾಗಿಲಿಗೆ ಕೊಂಡೊಯ್ಯುವ ಕಾರ್ಯ ಮಾಡುತ್ತಿದ್ದೇವೆ. ಫಲಾನುಭವಿಗಳು ಯೋಜನೆಯನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಸಮಾಜದಲ್ಲಿ ಮುಂದೆ ಬರಬೇಕು ಎಂದು ರಾಮದಾಸ್​ ಕರೆ ನೀಡಿದ್ದಾರೆ.