ಜಿಲ್ಲೆ

ನಿನ್ನೆ ತಡರಾತ್ರಿ ಮಗನಿಂದಲೇ ನಡೆಯಿತು ಘೋರ ದುರಂತ: ಪ್ರೇಯಸಿ ಜತೆಗಿದ್ದ ತಂದೆ ಸೇರಿ ಇಬ್ಬರ ಹತ್ಯೆ

arunakunigal

ಮೈಸೂರು: ನಗರ ಹೊರವಲಯದಲ್ಲಿ ಮಗನಿಂದಲೇ ತಂದೆ ಹಾಗೂ ತಂದೆಯ ಜತೆಗಿದ್ದ ಮಹಿಳೆಯ ಬರ್ಬರ ಕೊಲೆಯಾಗಿದೆ.

ಶಿವಪ್ರಕಾಶ್ (56) ಮತ್ತು ಲತಾ (48) ಕೊಲೆಯಾದವರು. ಶಿವಪ್ರಕಾಶ್​ರ ಪುತ್ರ ಸಾಗರ್ ಕೊಲೆ ಆರೋಪಿ. ಶಿವಪ್ರಕಾಶ್ ಕೆ.ಜಿ ಕೊಪ್ಪಲು ನಿವಾಸಿ. ಲತಾ ಮೈಸೂರಿನ ಶ್ರೀನಗರದ ನಿವಾಸಿ. ಗುರುವಾರ ರಾತ್ರಿ ಶಿವಪ್ರಕಾಶ್​ ಶ್ರೀನಗರದಲ್ಲಿ ಲತಾಳ ಮನೆಯಲ್ಲಿದ್ದರು.

ಅಲ್ಲಿಗೆ ಮಚ್ಚು ಹಿಡಿದು ನಿನ್ನೆ ರಾತ್ರಿ ಲತಾ ಮನೆಗೆ ನುಗ್ಗಿದ ಸಾಗರ್​, ತಂದೆಯನ್ನ ಬರ್ಬರವಾಗಿ ಕೊಚ್ಚಿ ಕೊಂದ. ಬಳಿಕ ಲತಾಗೂ ಮಚ್ಚಿನಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆ. ಇದನ್ನ ತಡೆಯಲು ಬಂದ ಲತಾಳ ಪುತ್ರ ನಾಗಾರ್ಜುನನ ಮೇಲೂ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ. ಗಂಭಿರ ಗಾಯಗೊಂಡ ನಾಗಾರ್ಜುನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ದಕ್ಷಿಣ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.