ಜಿಲ್ಲೆ

ಕರೊನಾ ಸೋಂಕಿತ ಅತ್ತೆಯನ್ನ ಮನೆಗೆ ಸೇರಿಸಿಕೊಳ್ಳದ ಅಳಿಯ! ಆ ಮನೆಯೇನೂ ಆತನದ್ದಲ್ಲ...

ಮಂಡ್ಯ: ಕೋವಿಡ್ ಪಾಸಿಟಿವ್ ಬಂದ ಅತ್ತೆಯನ್ನ ಮನೆಗೆ ಸೇರಿಸಿಕೊಳ್ಳಲ್ಲ ಎಂದು ಅಳಿಮಯ್ಯ ಅಮಾನವೀಯವಾಗಿ ವರ್ತಿಸಿದ ಘಟನೆ ಮದ್ದೂರು ತಾಲೂಕಿನ ಅರೆಚಾಕನಹಳ್ಳಿ ಗ್ರಾಮದಲ್ಲಿ ಸಂಭವಿಸಿದೆ.

ಅಂದಹಾಗೇ ಈ ಅತ್ತೆಯೇನೂ ಅಳಿಯನ ಮನೆಗೆ ಹೋಗಿರಲಿಲ್ಲ. ಅಳಿಯನೇ ಅತ್ತೆ ಮನೆಯಲ್ಲೇ ವಾಸವಿದ್ದ. ಇದೀಗ ಕೋವಿಡ್​ ಸೋಂಕು ತಗುಲಿದ ಅತ್ತೆಯನ್ನೇ ಮನೆಗೆ ಸೇರಿಸಿಕೊಳ್ಳಲು ಒಪ್ಪಿಲ್ಲ!

ಅರೆಚಾಕನಹಳ್ಳಿ ನಿವಾಸಿ ಸಿದ್ದಮ್ಮಗೆ ಕರೊನಾ ಸೋಂಕು ಪಾಸಿಟಿವ್​ ಬಂದಿದ್ದರಿಂದ ಹೋಂ ಐಸೋಲೇಷನ್​ನಲ್ಲಿ ಇರುವಂತೆ ಆಸ್ಪತ್ರೆ ಸಿಬ್ಬಂದಿ ತಿಳಿಸಿದ್ದರು. ಆದರೆ ಸಿದ್ದಮ್ಮನ ಅಳಿಮಯ್ಯ ಮುತ್ತೇಗೌಡ ಇದಕ್ಕೆ ಒಪ್ಪಲಿಲ್ಲ. ಎಷ್ಟೇ ಮನವೊಲಿಸಿದರೂ ಆತ ಮಾತ್ರ ಅತ್ತೆಯನ್ನ ಮನೆಗೆ ಸೇರಿಸಿಕೊಳ್ಳಲೇ ಇಲ್ಲ. ಕೊನೆಗೆ ಆಸ್ಪತ್ರೆ ಸಿಬ್ಬಂದಿಯೇ ಮದ್ದೂರು ತಾಲೂಕು ಆಸ್ಪತ್ರೆಗೆ ಸಿದ್ದಮ್ಮನನ್ನು ದಾಖಲಿಸಿದರು.