ಬೆಂಗಳೂರು: ರೂಪದರ್ಶಿ ಮೇಲೆ ಪ್ರಿಯಕರನಿಂದಲೇ ಅತ್ಯಾಚಾರ ನಡೆದಿದ್ದು, ಖಾಸಗಿ ವಿಡಿಯೋ ಇಟ್ಟುಕೊಂಡ ಪ್ರಿಯಕರ ಬ್ಲ್ಯಾಕ್ಮೇಲ್ ಮಾಡುತ್ತಾ ಹಲವು ಬಾರಿ ಲೈಂಗಿಕ ದೌರ್ಜನ್ಯವೆಸಗಿದ್ದಾನೆ ಎಂದು ಯಶವಂತಪುರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ನಗರದಲ್ಲಿ ವಾಸವಿರುವ ಯುವತಿಯೊಬ್ಬಳು ಮಾಡೆಲ್ನಲ್ಲಿ ಗುರುತಿಸಿಕೊಂಡಿದ್ದಾಳೆ. ಈಕೆಗೆ ಕಳೆದ ವರ್ಷ ಫೇಸ್ಬುಕ್ನಲ್ಲಿ ಪ್ರಮೋದ್ ಎಂಬ ಯುವಕನ ಪರಿಚಯವಾಗಿದ್ದು, ಸ್ನೇಹ ಬೆಳೆದಿದೆ. ಕೊನೆಗೆ ಪ್ರೀತಿಯ ಬಲೆಗೆ ಬೀಳಿಸಿಕೊಂಡು ಮದುವೆ ಆಗುವುದಾಗಿ ಹೇಳಿದ್ದ. ಆಕೆಯೂ ಆತನನ್ನ ನಂಬಿದ್ದಳು. ಮದುವೆ ಆಗಲು ನಿರ್ಧರಿಸಿದ್ದಳು. ಈ ನಡುವೆ ಜ್ಯೂಸ್ನಲ್ಲಿ ಮತ್ತು ಬರುವ ಮಾತ್ರೆ ಬೆರೆಸಿ ತನ್ನ ಪ್ರೇಯಸಿಗೆ ಕುಸಿಡಿದ ಪ್ರಮೋದ್, ಆಕೆ ಮೇಲೆ ಅತ್ಯಾಚಾರವೆಸಗಿದ್ದಾನೆ. ಖಾಸಗಿ ವಿಡಿಯೋ ಸೆರೆ ಹಿಡಿದು ಆಕೆಯನ್ನ ಬೆದರಿಸಿದ್ದಲ್ಲದೆ, ಆತನ ಗೆಳೆಯ ಧನಂಜಯನನ್ನೂ ಕರೆತಂದು ಪ್ರಿಯತಮೆ ಮೇಲೆ ಅತ್ಯಾಚಾರವೆಸಗಿದ್ದಾನೆ.
ಪ್ರಿಯತಮೆಯ ಖಾಸಗಿ ವಿಡಿಯೋ ಮತ್ತು ಫೋಟೋ ಇಟ್ಟುಕೊಂಡ ಪ್ರಮೋದ್, ನಾನು ಕರೆದಾಗಲೆಲ್ಲ ನೀನು ಬರಬೇಕು. ಇಲ್ಲವಾದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ನಿನ್ನ ಖಾಸಗಿ ವಿಡಿಯೋ ವೈರಲ್ ಮಾಡ್ತೀನಿ. ನಿನ್ನ ತಂದೆ-ತಾಯಿಗೆ ತೋರಿಸ್ತೀನಿ ಎಂದು ಬೆದರಿಕೆ ಹಾಕಿ 16 ಬಾರಿ ಲೈಂಗಿಕ ಕಿರುಕುಳ ಕೊಟ್ಟಿದ್ದಾನೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ.