ಜಿಲ್ಲೆ

ಕಾಲೇಜು ಹಾಸ್ಟೆಲ್​ನಲ್ಲೇ ಎಂಬಿಬಿಎಸ್​ ವಿದ್ಯಾರ್ಥಿ ಆತ್ಮಹತ್ಯೆ

ಕೊಡಗು: ಎಂಬಿಬಿಎಸ್​ ವಿದ್ಯಾರ್ಥಿಯೊಬ್ಬ ಕಾಲೇಜು ಹಾಸ್ಟೆಲ್​ನಲ್ಲೇ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯಲ್ಲಿ ಸಂಭವಿಸಿದೆ.

ಕೊಡಗು ಮೆಡಿಕಲ್ ಕಾಲೇಜು ವಿದ್ಯಾರ್ಥಿ ಪ್ರದೀಪ್(23) ಮೃತ ದುರ್ದೈವಿ. ಬೀದರ್ ಜಿಲ್ಲೆ ಔರಾದ್ ಮೂಲದ ಪ್ರದೀಪ್​, ಕೊಡಗು ಮೆಡಿಕಲ್​ ಕಾಲೇಜಿನಲ್ಲಿ ದ್ವಿತೀಯ ವರ್ಷದ ಎಂಬಿಬಿಎಸ್​ ವ್ಯಾಸಂಗ ಮಾಡುತ್ತಿದ್ದ.

ಕಾಲೇಜಿನ ಹಾಸ್ಟೆಲ್​ನಲ್ಲೇ ವಾಸವಿದ್ದ ಪ್ರದೀಪ್​, ಭಾನುವಾರ ಸಂಜೆ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದಾನೆ. ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಆದರೆ, ಮಾನಸಿಕ ಖಿನ್ನತೆಗೊಳಗಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.