ಜಿಲ್ಲೆ

ಕೆಎಸ್ಸಾರ್ಟಿಸಿ ಬಸ್​- ಕಂಟೈನರ್​ ನಡುವೆ ಅಪಘಾತ: 8ಕ್ಕೂ ಹೆಚ್ಚು ಮಂದಿ ಗಾಯ

arunakunigal

ಆನೇಕಲ್: ಬೆಂಗಳೂರಿನಿಂದ ಸೇಲಂಗೆ ಹೊರಟಿದ್ದ ಕೆಎಸ್ಆರ್​ಟಿಸಿ ಬಸ್ ಮಾರ್ಗಮಧ್ಯೆ ಅಪಘಾತಕ್ಕೀಡಾಗಿದ್ದು, 8ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ಅತ್ತಿಬೆಲೆ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದೆ.

ಬೆಂಗಳೂರಿನಿಂದ ಹೊಸೂರಿಗೆ ಹೋಗುತ್ತಿದ್ದ ಕಂಟೈನರ್ ಲಾರಿಗೆ ಸೋಮವಾರ ಬೆಳಗಿನ ಜಾವ 3:30ರ ಸಮಯದಲ್ಲಿ ಹಿಂಬದಿಯಿಂದ ಕೆಎಸ್ಆರ್​ಟಿಸಿ ಬಸ್​ ಡಿಕ್ಕಿ ಹೊಡೆದಿದೆ. ಬಸ್​ನ ಹಿಂಭಾಗ ಸಂಪೂಣರ್ ಜಖಂ ಆಗಿದೆ. ಬಸ್​ನಲ್ಲಿದ್ದ ಸುಮಾರು 10 ಮಂದಿ ಗಾಯಗೊಂಡಿದ್ದು, ಆಕ್ಸ್ಫರ್ಡ್ ಮತ್ತು ಶ್ರೀ ಸಾಯಿ ಆಸ್ಪತ್ರೆಗೆ ರವಾನಿಸಲಾಗಿದೆ.