

ಬೆಂಗಳೂರು: ಬಹುಭಾಷಾ ನಟಿ ಸಂಜನಾ ಗಲ್ರಾನಿ ಬಾಳಲ್ಲಿ ಹೊಸ ಪರ್ವ ಶುರುವಾಗಿದ್ದು, ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
ಸಂಜನಾ ಐದು ತಿಂಗಳ ಗರ್ಭಿಣಿ. ಈ ಸುದ್ದಿ ತಿಳಿದ ಅಭಿಮಾನಿಗಳು ಸಂಜನಾಗೆ ಶುಭಕೋರುತ್ತಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಸಿನಿಮಾ ಇಂಡಸ್ಟ್ರಿಯಲ್ಲೂ ತನ್ನದೇ ಆದ ಹೆಸರು ಮಾಡಿರುವ ಸಂಜನಾ, ಜನಪ್ರಿಯ ರಿಯಾಲಿಟಿ ಶೋಗಳಾದ 'ಬಿಗ್ ಬಾಸ್ ಕನ್ನಡ', 'ಮುಜ್ಸೇ ಶಾದಿ ಕರೋಗೆ'ದಲ್ಲೂ ಪಾಲ್ಗೊಂಡುಅಭಿಮಾನಿಗಳ ಮನ ಗೆದ್ದಿದ್ದರು.
ಕರೊನಾದಂತಹ ಸಂಕಷ್ಟ ಕಾಲದಲ್ಲಿ ತನ್ನ ಫೌಂಡೇಶನ್ ಮೂಲಕ ಬಡವರಿಗೆ ಸಹಾಯ ಮಾಡಿದ್ದರು. ಪ್ರತಿಯೊಬ್ಬರ ಜೀವನದಲ್ಲಿ ದಿನನಿತ್ಯ ಯೋಗಾಭ್ಯಾಸ ಅನಿವಾರ್ಯ ಎಂದು ಸಾರಿ ಸಾರಿ ಹೇಳಿದ್ದರು. ಯೋಗ ಮಾಡುವಂತೆ ಯುವಜನತೆಗೆ ಪ್ರೋತ್ಸಾಹ ನೀಡಿದ್ದರು. ಸದ್ಯ ಅಮ್ಮನಾಗುವ ಖುಷಿಯಲ್ಲಿ ಸಂಜನಾ ಇದ್ದಾರೆ.