ಜಿಲ್ಲೆ

ಜಿಟಿಡಿ ನಾಯಕತ್ವದ ಬಗ್ಗೆ ಅಪಸ್ವರ ಕೇಳಿ ಬಂದ್ರೆ ನಾನು ಸಹಿಸಲ್ಲ: ಮೈಸೂರಲ್ಲಿ ಎಚ್​.ಡಿ.ದೇವೇಗೌಡ ಖಡಕ್​ ವಾರ್ನಿಂಗ್​

arunakunigal

ಮೈಸೂರು: ಜಿ.ಟಿ. ದೇವೇಗೌಡರ ನಾಯಕತ್ವದ ಬಗ್ಗೆ ಒಂದೇ ಒಂದು ಅಪಸ್ವರ ಕೇಳಿ ಬಂದರೂ ನಾನು ಸಹಿಸಲ್ಲ ಎಂದು ಮೈಸೂರು ಜಿಲ್ಲೆಯ ಜೆಡಿಎಸ್​ ಮುಖಂಡರಿಗೆ ಜೆಡಿಎಸ್​ ವರಿಷ್ಠ ಎಚ್​.ಡಿ.ದೇವೇಗೌಡ ಎಚ್ಚರಿಕೆ ಕೊಟ್ಟಿದ್ದಾರೆ.

ಚಾಮುಂಡಿ ಬೆಟ್ಟದಲ್ಲಿ ಶುಕ್ರವಾರ ಜೆಡಿಎಸ್​ ಶಾಸಕರು ಮತ್ತು ಮುಂಬರುವ ವಿಧಾನಸಭಾ ಚುನಾವಣೆಯ ಜೆಡಿಎಸ್​ ಅಭ್ಯರ್ಥಿಗಳ ಬಳಿ ಮಾತನಾಡಿದ ಎಚ್.ಡಿ.ದೇವೇಗೌಡ, ಜಿಟಿಡಿ ವಿರುದ್ಧ ಅಪಸ್ವರ ಎತ್ತುವವರು ಹೊರಗೆ ಹೋಗಬಹುದು ಎಂದರು.

ಮೈಸೂರು ಜಿಲ್ಲೆಯ ಎಲ್ಲಾ ಉಸ್ತುವಾರಿಯನ್ನು ಜಿ.ಟಿ.ದೇವೇಗೌಡರಿಗೆ ಕೊಟ್ಟಿದ್ದೇವೆ. ಅವರ ನಾಯಕತ್ವದಲ್ಲೇ ಎಲ್ಲಾ ನಡೆಯುತ್ತದೆ. ಅವರ ತೀರ್ಮಾನವೇ ಅಂತಿಮ. ಅವರ ಬಗ್ಗೆ ಕೊಂಕು ಮಾತನಾಡಿದರೆ ನಾನು ಸಹಿಸುವುದಿಲ್ಲ ಎಂದು ಜಿಟಿಡಿ ಅವರ ವಿರೋಧಿಗಳಿಗೆ ಖಡಕ್ ಎಚ್​ಡಿಡಿ ಖಡಕ್​ ವಾರ್ನಿಂಗ್​ ಕೊಟ್ಟರು.

ಇದೇ ವೇಳೆ ಮೈಸೂರು ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಜೆಡಿಎಸ್​ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಜಿಟಿಡಿ ಅವರೇ ಬಿಡುಗಡೆ ಮಾಡಿದರು.