ಜಿಲ್ಲೆ

ಮಂಗಳೂರಲ್ಲಿ ಚಾರ್ಜ್​ಗೆ ಇಟ್ಟಿದ್ದ ಇಲೆಕ್ಟ್ರಿಕ್​ ಸ್ಕೂಟರ್​ ಬೆಂಕಿಗಾಹುತಿ

arunakunigal

ಮಂಗಳೂರು: ವಿದ್ಯುತ್​ಚಾಲಿತ ದ್ವಿಚಕ್ರ ವಾಹನಗಳ (ಇ.ವಿ.) ಬ್ಯಾಟರಿಗಳು ಸ್ಫೋಟ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ದೇಶದ ವಿವಿಧ ಭಾಗಗಳಲ್ಲಿ ಈಗಾಗಲೇ ಹಲವರ ಜೀವಹಾನಿಯೂ ಆಗಿದೆ. ಇದೀಗ ಮಂಗಳೂರು ನಗರದ ಬೋಂದೆಲ್​ ಕೆಎಚ್​ಬಿ ಕಾಲನಿಯಲ್ಲಿ ಭಾನುವಾರ ಮಧ್ಯಾಹ್ನ ಚಾರ್ಜ್​ಗೆ ಇಟ್ಟಿದ್ದ ಇಲೆಕ್ಟ್ರಿಕ್​ ಸ್ಕೂಟರ್​ ಬೆಂಕಿ ಹೊತ್ತಿಕೊಂಡು ಸುಟ್ಟು ಕರಕಲಾಗಿದೆ.

ಸ್ಕೂಟರನ್ನು ಮಾಲೀಕ ಜಯರಾಮ ಎಂಬುವರು ಮನೆ ಪಾರ್ಕಿಂಗ್​ ಜಾಗದಲ್ಲಿ ಚಾರ್ಜ್​ಗೆ ಇಟ್ಟಿದ್ದರು. ಕೆಲವೇ ಗಂಟೆಯಲ್ಲಿ ಬೆಂಕಿ ಕಾಣಿಸಿಕೊಂಡು, ಸ್ಕೂಟರ್​ ಸ್ಫೋಟಗೊಂಡಿದೆ. ಯಂತ್ರಗಳು, ಬಿಡಿಭಾಗಗಳು ಸೇರಿದಂತೆ ಸಂಪೂರ್ಣ ಸ್ಕೂಟರ್​ ಸುಟ್ಟಿದೆ. ಕದ್ರಿ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಬೆಂಕಿ ನಂದಿಸಿದೆ. ಕಾವೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಇಲೆಕ್ಟ್ರಿಕ್​ ಸ್ಕೂಟರ್​ಗಳು ಬೆಂಕಿಗಾಹುತಿ ಆಗುತ್ತಿರುವುದು ಮಾಲೀಕರಲ್ಲಿ ಆತಂಕ ಹುಟ್ಟುಹಾಕಿದೆ.