ಮೈಸೂರು: ನಟ ದರ್ಶನ್ ಹೆಸರಲ್ಲಿ ಹಣ ವಂಚನೆ ಯತ್ನ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಇದೀಗ ಈ ಪ್ರಮುಖ ಆರೋಪಿ ಅರುಣಾಕುಮಾರಿ ಕುರಿತು ಸ್ಫೋಟಕ ರಹಸ್ಯವನ್ನು ಸುದ್ದಿಗೋಷ್ಠಿಯಲ್ಲಿ ನಟ ದರ್ಶನ್ ಬಿಚ್ಚಿಟ್ಟಿದ್ದಾರೆ
ಆರೋಪಿ ಅರುಣಾಕುಮಾರಿ ವಿವಾಹಿತ ಮಹಿಳೆ. ಗಂಡನ ಹೆಸರು ಕುಮಾರ್. ಈ ದಂಪತಿಗೆ ಮಗನಿದ್ದು, 7ನೇ ತರಗತಿ ಓದುತ್ತಿದ್ದಾನೆ. ಆದರೂ ತನಗಿಂತ 9 ವರ್ಷ ಚಿಕ್ಕವನೊಂದಿಗೆ 2ನೇ ಮದುವೆ ಆಗಲು ಅರುಣಾಕುಮಾರಿ ಮಾಸ್ಟರ್ ಪ್ಲ್ಯಾನ್ ಮಾಡಿದ್ದಳಂತೆ. ಗಂಡ ಕುಮಾರ್ ಮತ್ತು ಅರುಣಾ ಏಳೆಂಟು ವರ್ಷದಿಂದ ಪರಸ್ಪರ ದೂರವಿದ್ದಾರೆ. ಪುತ್ರನೊಂದಿಗೆ ಬೆಂಗಳೂರಿನಲ್ಲಿ ವಾಸವಿರುವ ಅರುಣಾ, 26 ವರ್ಷದ ಯುವಕ ಮಧುಕೇಶ ಎಂಬಾತನಿಗೆ ಕೆಲಸ ಕೊಡಿಸುವ ನೆಪದಲ್ಲಿ ಆತನನ್ನೇ ತನ್ನ ಬುಟ್ಟಿಗೆ ಹಾಕಿಕೊಂಡು ಲವ್ವಿಡವ್ವಿ ಶುರುವಿಟ್ಟುಕೊಂಡಿದ್ದಳಂತೆ.
65 ಸಾವಿರ ರೂ. ವೇತನ ಬರುವ ಕೆಲಸ ಕೊಡಿಸುತ್ತೇನೆ ಎಂದು ಬ್ಯಾಂಕ್ ಸೀಲ್ ನಕಲು ಮಾಡಿ ನೇಮಕಾತಿ ಆದೇಶವನ್ನೂ ಮಧುಕೇಶನಿಗೆ ಕೊಟ್ಟು, ಆತನಿಂದ 2 ಲಕ್ಷ ರೂ. ಲಂಚ ಸ್ವೀಕರಿದ್ದಳು ಅರುಣಾಕುಮಾರಿ. ಈ ನಡುವೆ ಇಬ್ಬರ ನಡುವೆ ಲವ್ವಿಡವ್ವಿ ಶುರುವಾಗಿ ಕಳೆದ ಆಗಸ್ಟ್ನಲ್ಲಿ ಮದುವೆಯಾಗಲು ಸಿದ್ಧತೆಯನ್ನೂ ಮಾಡಿಕೊಂಡಿದ್ದಳು. ತನ್ನ ಮಗನನ್ನು ಅಕ್ಕನ ಮಗ ಎಂದು ಸುಳ್ಳು ಹೇಳಿದ್ದಳು. ಕೊನೆಗೆ ಅರುಣಾಳ ಗಂಡ ಕುಮಾರ್ನನ್ನು ಮಧುಕೇಶ್ಗೆ ಪರಿಚಯ ಮಾಡಿಕೊಟ್ಟು ಆತನಿಗೆ ಬುದ್ಧಿ ಹೇಳಿ ಕಳುಹಿಸಿದ್ದರಂತೆ ನಟ ದರ್ಶನ್. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ನಟ ದರ್ಶನ್ ವಿವರಿಸಿದರು.