ಜಿಲ್ಲೆ

ಆನೇಕಲ್​ನ ಶ್ರೀ ಚೈತನ್ಯ ರೆಸಿಡೆನ್ಶಿಯಲ್ ಕಾಲೇಜಿನಲ್ಲಿ 60 ವಿದ್ಯಾರ್ಥಿಗಳಿಗೆ ಕರೊನಾ ಪಾಸಿಟಿವ್​

ಆನೇಕಲ್: ಮಹಾಮಾರಿ ಕರೊನಾ ಸೋಂಕು ವಿದ್ಯಾರ್ಥಿಗಳ ಮೇಲೂ ಅಟ್ಟಹಾಸ ಮೆರೆಯುತ್ತಿದ್ದು, ಇದೀಗ ಒಂದೇ ಕಾಲೇಜಿನ 60 ವಿದ್ಯಾರ್ಥಿಗಳಿಗೆ ಸೋಂಕು ದೃಢಪಟ್ಟಿದೆ.

ಹುಸ್ಕೂರಿನ ಶ್ರೀ ಚೈತನ್ಯ ರೆಸಿಡೆನ್ಶಿಯಲ್ ಕಾಲೇಜಿನ ಹಾಸ್ಟೆಲ್​ನಲ್ಲಿದ್ದ 60 ವಿದ್ಯಾರ್ಥಿಗಳಿಗೆ ಕರೊನಾ ಪಾಸಿಟಿವ್ ಬಂದಿದ್ದು, ಆನೇಕಲ್ ತಾಲೂಕು ಆರೋಗ್ಯ ಇಲಾಖೆ ಅಧಿಕಾರಿಗಳು ಸ್ಥಳದಲ್ಲಿ ಭೇಟಿ ನೀಡಿದ್ದಾರೆ.

ಕರ್ನಾಟಕ ಹಾಗೂ ತಮಿಳುನಾಡಿನ ಭಾಗದ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಲ್ಲಿದ್ದು, ಸೋಮವಾರ ಮತ್ತು ಮಂಗಳವಾರ ಒಟ್ಟು ಎರಡು ದಿನದಲ್ಲಿ 60 ಮಂದಿಗೆ ಕರೊನಾ ಸೋಂಕು ಇರುವುದು ಗೊತ್ತಾಗಿದೆ. ಇನ್ನೂ ಹಲವರಿಗೆ ಕರೊನಾ ಪರೀಕ್ಷೆ ಮಾಡಲಾಗುತ್ತಿದೆ. ಹಾಸ್ಟೆಲ್​ನ ಸಿಬ್ಬಂದಿಗಳಿಗೆ ಸೋಂಕು ದೃಢಪಟ್ಟಿಲ್ಲ. ವಿದ್ಯಾರ್ಥಿಗಳಿಂದಲೇ ಎಲ್ಲರಿಗೂ ಕರೊನಾ ಹರಡಿರುವ ಸಾಧ್ಯತೆ ಇದೆ.

ಎಲ್ಲ ತರಗತಿಗಳನ್ನು ಮೊಟಕುಗೊಳಿಸಿದ ಕಾಲೇಜು ಆಡಳಿತ ಮಂಡಳಿ, 335‌ ವಿದ್ಯಾರ್ಥಿನಿಯರ ಪೈಕಿ 54‌ ಮಂದಿಯನ್ನು ಆಸ್ಪತ್ರೆ ಸೇರಿಸಿದೆ, ಉಳಿದ ವಿದ್ಯಾರ್ಥಿಗಳು ಕ್ವಾರೆಂಟೈನ್​ನಲ್ಲಿದ್ದಾರೆ. ಕರೊನಾ ಪಾಸಿಟಿವ್ ಬಂದ ವಿದ್ಯಾರ್ಥಿನಿಯರಲ್ಲಿ ಬಹುತೇಕರು ಕರ್ನಾಟಕದವರು. 8 ವಿದ್ಯಾರ್ಥಿಗಳಿಗೆ ಅತಿಯಾದ ವಾಂತಿ ಭೇದಿ ಕಾಣಿಸಿಕೊಂಡಿದೆ.