ಮನೆಯ ಟೆರೇಸ್​, ರೂಮಿನಲ್ಲೇ 3 ಕೋಟಿ ಮೌಲ್ಯದ ಗಾಂಜಾ ಬೆಳೆದ! ಬಯಲಾಯ್ತು ಈಗಲ್ಟನ್​ ರೆಸಾರ್ಟ್​ನ ವಿಲ್ಲಾ ರಹಸ್ಯ

ganaja bidadi
Published on

ರಾಮನಗರ: ಇಲ್ಲೊಬ್ಬ ಖತರ್ನಾಕ್​ ವ್ಯಕ್ತಿ ಮನೆಯೊಳಗೇ ಗಾಂಜಾ ಬೆಳೆದು ಕೊನೆಗೂ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ. ಆತ ರಾಜಧಾನಿ ಕೂಗಳತೆ ದೂರದಲ್ಲೇ ಪ್ರತಿಷ್ಠಿತ ವಿಲ್ಲಾದಲ್ಲೇ ಗಾಂಜಾ ಬೆಳೆಯುತ್ತಿದ್ದ ಎಂಬುದು ರಾಜ್ಯದಲ್ಲಿ ಗಾಂಜಾ ದಂಧೆ ಹೇಗೆಲ್ಲ ನಡೆಯುತ್ತಿದೆ ಎಂಬುದಕ್ಕೆ ಸಾಕ್ಷಿ.

ಬಿಡದಿಯ ಈಗಲ್​ಟನ್ ರೆಸಾರ್ಟ್​ನ ವಿಲ್ಲಾದಲ್ಲಿ ವಾಸವಿದ್ದ ಇರಾನಿ ಮೂಲದ ಜಾವಿದ್ ರುಸ್ತಂ ಪುರಿ(36) ಎಂಬಾತ ಮನೆಯ ಟೆರೇಸ್ ಮತ್ತು ರೂಮ್​ನಲ್ಲಿಯೇ ಹೈಡ್ರೋ ಗಾಂಜಾ ಗಿಡಗಳು ಒಂದೂವರೆ ವರ್ಷದಿಂದ ಬೆಳೆಯುತ್ತಿದ್ದ. ಆನ್​ಲೈನ್​ ಮೂಲಕ ಸೀಡ್ಸ್ ತರಿಸಿ ಮನೆಯಲ್ಲೇ ಹೈಡ್ರೋ ಗಾಂಜಾ ಬೆಳೆದು ಮಾರಾಟ ಮಾಡುತ್ತಿದ್ದನಂತೆ.

ಖಚಿತ ಮಾಹಿತಿ ಮೇರೆಗೆ ಬೆಂಗಳೂರಿನ ಸಿಸಿಬಿ ಪೊಲೀಸರು ಸೋಮವಾರ ಆತನ ಮನೆ ಮೇಲೆ ದಾಳಿ ಮಾಡಿದ್ದು, ಮೂರು ಕೋಟಿಗೂ ಹೆಚ್ಚು ಬೆಲೆ ಬಾಳುವ ಹೈಡ್ರೋ ಗಾಂಜಾ ಮತ್ತು ಕೆಮಿಕಲ್ಸ್​ ಪತ್ತೆಯಾಗಿದೆ. ಮನೆಯ ಟೆರೇಸ್ ಹಾಗೂ ರೂಮ್​ನಲ್ಲಿ 150ಕ್ಕೂ ಹೆಚ್ಚು ಹೈಡ್ರೋ ಗಾಂಜಾ ಗಿಡಗಳು ಸಿಕ್ಕಿವೆ. ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net