ಜಿಲ್ಲೆ

ಸಹ್ಯಾದ್ರಿ ಕಾಲೇಜಿನಲ್ಲಿ ಪ್ರೊಫೆಸರ್​ ಹುದ್ದೆ ನೇಮಕ: ಅರ್ಜಿ ಸಲ್ಲಿಕೆಗೆ ಮೇ 7 ಕೊನೇ ದಿನ

ಮಂಗಳೂರಿನ ಸಹ್ಯಾದ್ರಿ ಕಾಲೇಜ್​ ಆಫ್​​ ಇಂಜಿನಿಯರಿಂಗ್​ ಆ್ಯಂಡ್​ ಮ್ಯಾನೇಜ್​ಮೆಂಟ್​ನಲ್ಲಿ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಆನ್​ಲೈನ್​ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತರು ಸಂಸ್ಥೆಯ ಅಧಿಕೃತ ವೆಬ್​ಸೈಟ್​ನಲ್ಲಿ ಅರ್ಜಿ ಸಲ್ಲಿಸಬಹುದು.

ಪ್ರೊಫೆಸರ್​, ಅಸೋಸಿಯೇಟ್​ ಮತ್ತು ಅಸಿಸ್ಟೆಂಟ್​ ಪ್ರೊಫೆಸರ್​ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ. ಆಯಾ ಹುದ್ದೆಗಳಿಗೆ ಅನುಗುಣವಾಗಿ ವೃತ್ತಿ ಅನುಭವ ಹಾಗೂ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಕೇಳಲಾಗಿದೆ. ಆಸಕ್ತರು ಅಗತ್ಯ ದಾಖಲೆಗಳೊಂದಿಗೆ ಮೇ 7ರೊಳಗೆ ಅರ್ಜಿ ಸಲ್ಲಿಸಬಹುದು. ಆನ್​ಲೈನ್​ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದ್ದು, ನೇರವಾಗಿ ಬಂದ ಅರ್ಜಿ ತಿರಸ್ಕರಿಸಲಾಗುವುದು.

ಅಧಿಸೂಚನೆಗೆ: https://bit.ly/3LBntDv

ಮಾಹತಿಗೆ: https://www.sahyadri.edu.in/