ಜಿಲ್ಲೆ

ವೆಂಟಿಲೇಟರ್ ಸಿಗದೆ ಮತ್ತೊಂದು ಸಾವು; ಮುಂಡರಗಿ ಸರ್ಕಾರಿ ಆಸ್ಪತ್ರೆಯಲ್ಲಿ ಒಂದೇ ದಿನ ನಾಲ್ವರ ಮರಣ!

ಗದಗ: ಗದಗ ಜಿಲ್ಲೆಯ ಮುಂಡರಗಿ ಸರ್ಕಾರಿ ಆಸ್ಪತ್ರೆಯಲ್ಲಿ ಉಸಿರುಗಟ್ಟಿಸುವ ವಾತಾವರಣ ಮುಂದುವರಿದಿದ್ದು, ವೆಂಟಿಲೇಟರ್ ಸಿಗದೆ ಒಂದೇ ದಿನದಲ್ಲಿ ಒಟ್ಟು ನಾಲ್ವರು ಕರೊನಾ ಸೋಂಕಿತರು ಮೃತಪಟ್ಟಿದ್ದಾರೆ.

ಕರೊನಾ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ವೆಂಟಿಲೇಟರ್, ಆಕ್ಸಿಜನ್, ಬೆಡ್​ಗಳ ಕೊರತೆ ಹೆಚ್ಚಾಗಿದ್ದು, ಸರಿಯಾದ ಸಮಯಕ್ಕೆ ಬೇಕಾದಷ್ಟು ಸವಲತ್ತುಗಳು ಸಿಗದೆ ರೋಗಿಗಳು ಸಾವಿಗೀಡಾಗುವಂತಾಗಿದೆ. ಅಂಥದ್ದೇ ಪರಿಸ್ಥಿತಿ ಮುಂಡರಗಿ ಸರ್ಕಾರಿ ಆಸ್ಪತ್ರೆಯಲ್ಲೂ ಇದ್ದು, ವೆಂಟಿಲೇಟರ್ ಇಲ್ಲ ಎಂಬ ಕಾರಣಕ್ಕೆ ಇವತ್ತೊಂದೇ ದಿನ ನಾಲ್ಕು ಜನರು ಅನ್ಯಾಯವಾಗಿ ಸಾಯುವಂತಾಗಿದೆ.

ಕರೊನಾ ಸೋಂಕಿಗೆ ಒಳಗಾಗಿರುವವರ ಪೈಕಿ ಈ ಆಸ್ಪತ್ರೆಯಲ್ಲಿ ಇವತ್ತು ಇಬ್ಬರು ಮಹಿಳೆಯರು ಹಾಗೂ ಒಬ್ಬ ಪುರುಷ ವೆಂಟಿಲೇಟರ್ ಸಿಗದೆ ಮೃತಪಟ್ಟಿದ್ದು, ಇದೀಗ ಮತ್ತೊಬ್ಬ ಮಹಿಳೆ ಕೂಡ ಮೃತಪಟ್ಟಿದ್ದಾರೆ. ಇವತ್ತು ಬೆಳಗ್ಗೆ 65 ವರ್ಷದ ಮಹಿಳೆಯೊಬ್ಬರು ಈ ಆಸ್ಪತ್ರೆಗೆ ದಾಖಲಾಗಿದ್ದರು. ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಇವರಿಗೆ ಪೋಷಕರು ಹಾಗೂ ವೈದ್ಯರು ಎಷ್ಟೇ ಪ್ರಯತ್ನ ಪಟ್ಟರೂ ವೆಂಟಿಲೇಟರ್ ವ್ಯವಸ್ಥೆ ಆಗಿರಲಿಲ್ಲ. ಇಲ್ಲಿ ವೆಂಟಿಲೇಟರ್ ಬೆಡ್​ಗಳೆಲ್ಲ ಭರ್ತಿಯಾಗಿದ್ದು, ಇವರಿಗೆ ವೆಂಟಿಲೇಟರ್ ಬೆಡ್ ಸಿಗದೆ ಮೃತಪಟ್ಟಿದ್ದಾರೆ.